ಟೀಂ ಇಂಡಿಯಾಕ್ಕೆ ರಿ ಎಂಟ್ರಿ ಕೊಟ್ಟ ರಿಷಬ್ ಪಂತ್!
ಅವರೀಗ ಬೆಂಗಳೂರಿನ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಅವರು ಏಷ್ಯಾ ಕಪ್ ಗೆ ಸಿದ್ಧತೆ ನಡೆಸುತ್ತಿದ್ದ ಟೀಂ ಇಂಡಿಯಾ ಕ್ರಿಕೆಟಿಗರನ್ನು ಭೇಟಿ ಮಾಡಿದ್ದಾರೆ.
ಬೆಂಗಳೂರಿನ ಆಲೂರಿನಲ್ಲಿ ಟೀಂ ಇಂಡಿಯಾ ಏಷ್ಯಾ ಕಪ್ ಸಿದ್ಧತಾ ಶಿಬಿರದಲ್ಲಿ ಪಾಲ್ಗೊಂಡಿತ್ತು. ಈ ಕ್ಯಾಂಪ್ ಗೆ ರಿಷಬ್ ಪಂತ್ ಭೇಟಿ ನೀಡಿದ್ದಾರೆ. ತಮ್ಮ ಗೆಳೆಯರನ್ನು ಬಹುದಿನಗಳ ನಂತರ ಭೇಟಿ ಮಾಡಿದ ಸಂತೋಷ ಅವರಲ್ಲಿತ್ತು.