ಭಾರತ-ಪಾಕ್ ಪಂದ್ಯವಾಡಲು ಶ್ರೇಯಸ್ ಅಯ್ಯರ್ ಫಿಟ್, ಕೆಎಲ್ ರಾಹುಲ್ ಗೆ ಫಿಟ್ನೆಸ್ ಟೆಸ್ಟ್
ಈ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾ ಮಧ‍್ಯಮ ಕ್ರಮಾಂಕದ ಬ್ಯಾಟಿಗ ಶ್ರೇಯಸ್ ಅಯ್ಯರ್ ಸಂಪೂರ್ಣ ಫಿಟ್ ಆಗಿದ್ದು, ಸೆಪ್ಟೆಂಬರ್ 2 ರಂದು ನಡೆಯಲಿರುವ ಪಂದ್ಯಕ್ಕೆ ಲಭ್ಯರಿರಲಿದ್ದಾರೆ ಎಂದು ತಂಡದ ಮೂಲಗಳಿಂದ ತಿಳಿದುಬಂದಿದೆ.
ಆದರೆ ಕೆಎಲ್ ರಾಹುಲ್ ಫಿಟ್ನೆಸ್ ಟೆಸ್ಟ್ ಗೊಳಗಾಗಲಿದ್ದಾರೆ. ಕ್ಯಾಂಡಿಯಲ್ಲಿ ರಾಹುಲ್ ಫಿಟ್ನೆಸ್ ಟೆಸ್ಟ್ ಗೊಳಗಾಗಲಿದ್ದಾರೆ. ಆ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದರಷ್ಟೇ ಅವರು ಪಾಕ್ ವಿರುದ್ಧದ ಪಂದ್ಯಕ್ಕೆ ಲಭ್ಯರಿರಲಿದ್ದಾರೆ.