ಅಭ್ಯಾಸ ಪಂದ್ಯದ ಸ್ಕೋರ್ ನೋಡಿ ರಿಷಬ್, ಹರ್ಷಲ್ ಪಟೇಲ್ ರನ್ನು ಟ್ರೋಲ್ ಮಾಡಿದ ನೆಟ್ಟಿಗರು

ಸೋಮವಾರ, 10 ಅಕ್ಟೋಬರ್ 2022 (15:56 IST)
ಪರ್ತ್: ಟಿ20 ವಿಶ್ವಕಪ್ ಗೆ ಮುನ್ನ ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ರಿಷಬ್ ಪಂತ್ ಮತ್ತು ವೇಗಿ ಹರ್ಷಲ್ ಪಟೇಲ್ ರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

ಈ ಪಂದ್ಯದಲ್ಲಿ ಟೀಂ ಇಂಡಿಯಾ 13 ರನ್ ಗಳ ಗೆಲುವು ಸಾಧಿಸಿದೆ. ಆದರೆ ಭಾರತದ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ 16 ಎಸೆತ ಎದುರಿಸಿ ಗಳಿಸಿದ್ದು ಕೇವಲ 9 ರನ್. ಇನ್ನು, ಹರ್ಷಲ್ ಪಟೇಲ್ ತಮ್ಮ 4 ಓವರ್ ಗಳ ಕೋಟಾದಲ್ಲಿ 49 ರನ್ ಬಿಟ್ಟುಕೊಟ್ಟು ಕೇವಲ 1 ವಿಕೆಟ್ ಪಡೆದಿದ್ದರು.

ಹೀಗಾಗಿ ಇಬ್ಬರನ್ನೂ ಮೆಮೆಗಳ ಮೂಲಕ ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ದುರ್ಬಲ ತಂಡದ ಎದುರೇ ಈ ಪರಿಸ್ಥಿತಿಯಾದರೆ ಈ ಇಬ್ಬರೂ ನಿಜವಾಗಿ ವಿಶ್ವಕಪ್ ಪಂದ್ಯದಲ್ಲಿ ಯಾವ ಪರಿ ಪ್ರದರ್ಶನ ನೀಡಬಹುದು ಎಂದು ನೆಟ್ಟಿಗರು ಟೀಕಿಸಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ