ಐಪಿಎಲ್ ಗೆ ಬರಲಿದ್ದಾರೆ ರಿಷಬ್ ಪಂತ್! ಆದ್ರೆ ಇಲ್ಲಿದೆ ಟ್ವಿಸ್ಟ್!
ಆದರೆ ರಿಷಬ್ ಇಲ್ಲ ಎಂಬ ಬೇಸರದಲ್ಲಿದ್ದ ಅಭಿಮಾನಿಗಳಿಗೆ ಅವರು ಅಚ್ಚರಿಯ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ರಿಷಬ್ ಪಂತ್ ನಿನ್ನೆ ವಿಡಿಯೋವೊಂದರಲ್ಲಿ ನಾನು ಐಪಿಎಲ್ ಗೆ ಕಮ್ ಬ್ಯಾಕ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು.
ರಿಷಬ್ ಇಂತಹದ್ದೊಂದು ಹೇಳಿಕೆ ನೀಡುತ್ತಿದ್ದಂತೇ ಅಭಿಮಾನಿಗಳಲ್ಲಿ ಪುಳಕವುಂಟುಮಾಡಿದೆ. ಎಲ್ಲರೂ ಕ್ರಿಕೆಟ್ ಆಡುವಾಗ ನಾನೂ ಆಡದೇ ಇರಲು ಹೇಗೆ ಸಾಧ‍್ಯ? ನಾನೂ ಕಮ್ ಬ್ಯಾಕ್ ಮಾಡ್ತಿದ್ದೀನಿ ಎಂದಿದ್ದರು. ಆದರೆ ಇದರಲ್ಲೊಂದು ಟ್ವಿಸ್ಟ್ ಇದೆ. ರಿಷಬ್ ಫುಡ್ ಡೆಲಿವರಿ ಆಪ್ ಒಂದರ ಜಾಹೀರಾತಿಗಾಗಿ ಈ ವಿಡಿಯೋ ಹರಿಯಬಿಟ್ಟಿದ್ದರು. ಹೀಗಾಗಿ ರಿಷಬ್ ಯಾವ ರೀತಿ ಐಪಿಎಲ್ ನಲ್ಲಿ ಭಾಗಿಯಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ.