ಮಾಜಿ ಕೋಚ್ ರವಿಶಾಸ್ತ್ರಿಗೆ ಶಾಂಪೈನ್ ಉಡುಗೊರೆ ಕೊಟ್ಟ ರಿಷಬ್, ಕೊಹ್ಲಿ

ಸೋಮವಾರ, 18 ಜುಲೈ 2022 (10:05 IST)
ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯ ಗೆದ್ದ ಬಳಿಕ ಸರಣಿ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಶಾಂಪೈನ್ ಬಾಟಲಿಯನ್ನು ಕೊಡುಗೆಯಾಗಿ ನೀಡಲಾಗಿತ್ತು.

ಈ ವೇಳೆ ರಿಷಬ್ ಪಂತ್ ಹಾಗೂ ವಿರಾಟ್ ಕೊಹ್ಲಿ ಮೈದಾನದಲ್ಲಿ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾಜಿ ಕೋಚ್ ರವಿಶಾಸ್ತ್ರಿ ಬಳಿ ತೆರಳಿ ಶಾಂಪೈನ್ ಬಾಟಲಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮೊದಲು ಕೊಹ್ಲಿ ರವಿಶಾಸ್ತ್ರಿಯತ್ತ ತಿರುಗಿ ಶಾಂಪೈನ್ ಬಾಟಲಿ ಬೇಕಾ ಎಂದು ಕೇಳಿದ್ದಾರೆ. ಇದಕ್ಕೆ ರವಿಶಾಸ್ತ್ರಿ ತಂದುಕೊಡುವಂತೆ ಸನ್ನೆ ಮಾಡಿದಾಗ ಕೊಹ್ಲಿ ಬಾಟಲಿ ನೀಡಿದ್ದಾರೆ. ಅವರ ಹಿಂದೆಯೇ ರಿಷಬ್ ಪಂತ್ ಕೂಡಾ ಶಾಸ್ತ್ರಿ ಬಳಿಗೆ ಬಂದು ಶಾಂಪೈನ್ ಬಾಟಲಿ ನೀಡಿ ಹೋಗಿದ್ದಾರೆ. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ