ಮುಂಬೈ: ಟಿ20 ವಿಶ್ವಕಪ್ ಫೈನಲ್ ನಲ್ಲಿ ಕೊನೆಯ ಹಂತದಲ್ಲಿ ಗಾಯದ ನಾಟಕವಾಡಿ ಪಂದ್ಯವನ್ನು ಭಾರತದ ಪರವಾಗಿ ಆಗುವಂತೆ ಮಾಡಿದ ವಿಕೆಟ್ ಕೀಪರ್ ರಿಷಭ್ ಪಂತ್ ಈಗ ಅಂದಿನ ನಾಟಕದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಇತ್ತೀಚೆಗೆ ಕಪಿಲ್ ಶರ್ಮ ಶೋನಲ್ಲಿ ನಾಯಕ ರೋಹಿತ್ ಶರ್ಮಾ ಟಿ20 ವಿಶ್ವಕಪ್ ಫೈನಲ್ ಗೆಲುವಿಗೆ ರಿಷಭ್ ಪಂತ್ ನಾಟಕವೂ ಕಾರಣವಾಯ್ತು ಎಂದಿದ್ದರು. 5 ಓವರ್ ಗಳಲ್ಲಿ 30 ರನ್ ಬೇಕಾಗಿದ್ದಾಗ ಭಾರತ ಒತ್ತಡದಲ್ಲಿತ್ತು. ಆಫ್ರಿಕಾ ಸುಲಭವಾಗಿ ಪಂದ್ಯ ಗೆಲ್ಲುತ್ತಿತ್ತು.
ಆದರೆ ಬ್ಯಾಟಿಗರ ಲಹರಿ ಕಡಿದು ಹಾಕಲು ರಿಷಭ್ ಮೊಣಕಾಲಿಗೆ ಗಾಯವಾದವರಂತೆ ನಾಟಕವಾಡಿದರು. ಫಿಸಿಯೋವನ್ನು ಮೈದಾನಕ್ಕೆ ಕರೆಸಿ ಬ್ಯಾಂಡೇಜ್ ಹಾಕಿಸಿ ಹೊತ್ತು ಕಳೆದರು. ಇದರಿಂದ ಆಫ್ರಿಕಾ ವಿಚಲಿತವಾಯಿತು. ಈ ಬಗ್ಗೆ ಈಗ ಸ್ವತಃ ರಿಷಭ್ ಪಂತ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಹೀಗೇ ಆದರೆ ಆಫ್ರಿಕಾ ಪಂದ್ಯ ಗೆಲ್ಲಬಹುದು ಎನಿಸಿ ಏನಾದರೂ ಮಾಡಬೇಕು ಎಂದು ಯೋಚಿಸಿದೆ. ಫಿಸಿಯೋ ಮೈದಾನಕ್ಕೆ ಬಂದಾಗ ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ. ಸಾಧ್ಯವಾದಷ್ಟು ಸಮಯ ಹಾಳು ಮಾಡಿ, ನಿಧಾನವಾಗಿ ಬ್ಯಾಂಡೇಜ್ ಹಾಕಿ ಎಂದು ಸಲಹೆ ನೀಡಿದೆ. ಫಿಸಿಯೋ ತುಂಬಾ ನೋವಾಗುತ್ತಿದೆಯೇ ಎಂದು ಕೇಳಿದರು. ಆಗ ನಾನು ಸುಮ್ಮನೆ ನಾಟಕ ಮಾಡುತ್ತಿದ್ದೇನೆ ಎಂದೆ. ಹೀಗೆ ಪಂದ್ಯ ನಡೆಯುವುದನ್ನು ಕೊಂಚ ನಿಧಾನವಾಗಿಸುವುದರಿಂದ ಎಲ್ಲಾ ಬಾರಿಯೂ ಅನುಕೂಲವಾಗಬಹುದು ಎಂದು ಹೇಳಲು ಸಾಧ್ಯವಾಗದು. ಆದರೆ ನನ್ನ ಪ್ರಯತ್ನ ಮಾಡೋಣವೆನಿಸಿತು. ಅದು ನೆರವಿಗೆ ಬಂತು ಎಂದು ರಿಷಭ್ ಹೇಳಿದ್ದಾರೆ.
RISHABH PANT - THE MOMENTUM BREAKER...!!! ????????
Pant narrated the story behind his injury during the T20 World Cup final when SA needed 26 from 24. [Star Sports] pic.twitter.com/7AeyHAnzdF