ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ನಾಯಕರಾಗುವುದು ಇವರೇನಾ

Krishnaveni K

ಶನಿವಾರ, 12 ಅಕ್ಟೋಬರ್ 2024 (09:51 IST)
ಮುಂಬೈ: ಮುಂಬರುವ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಭಾಗಿಯಾಗುವುದು ಅನುಮಾನ ಎಂಬ ಸುದ್ದಿ ಬರುತ್ತಿದೆ.

ವೈಯಕ್ತಿಕ ಕಾರಣಗಳಿಂದ ರೋಹಿತ್ ಮೊದಲ ಟೆಸ್ಟ್ ಪಂದ್ಯದಿಂ ಹೊರಗುಳಿಯಲಿದ್ದಾರೆ ಎಂಬ ಸುದ್ದಿಗಳಿವೆ. ಆದರೆ ಅದಿನ್ನೂ ಖಚಿತವಾಗಿಲ್ಲ. ಆದರೆ ಬಿಸಿಸಿಐಗೆ ರೋಹಿತ್ ಈಗಾಗಲೇ ಸೂಚನೆ ನೀಡಿದ್ದಾರಂತೆ. ಅವರ ಸ್ಥಾನಕ್ಕೆ ಅಭಿಮನ್ಯು ಈಶ್ವರ್ ರನ್ನು ಆಯ್ಕೆ ಮಾಡಲು ಚಿಂತನೆಗಳೂ ನಡೆದಿದೆ.

ಆದರೆ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನೂತನ ನಾಯಕನನ್ನು ಆಯ್ಕೆ ಮಾಡಬೇಕಾಗುತ್ತದೆ. ಟೆಸ್ಟ್ ತಂಡಕ್ಕೆ ಈಗ ಖಾಯಂ ಉಪನಾಯಕರಿಲ್ಲ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಯಾರು ನಾಯಕರಾಗಬಹುದು ಎಂಬ ಚರ್ಚೆ ಶುರುವಾಗಿದೆ.

ಸದ್ಯಕ್ಕೆ ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ಹಾಗೂ ರಿಷಭ್ ಪಂತ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಈ ಪೈಕಿ ಕೆಎಲ್ ರಾಹುಲ್ ಮತ್ತು ಬುಮ್ರಾಗೆ ಈಗಾಗಲೇ ಟೆಸ್ಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವವಿದೆ. ಆದರೆ ರಿಷಭ್ ಪಂತ್ ಗೆ ನಾಯಕತ್ವ ಹೊಸದು. ಆದರೆ ಭವಿಷ್ಯದ ದೃಷ್ಟಿಯಿಂದ ರಿಷಭ್ ಗೆ ನಾಯಕತ್ವ ನೀಡಿ ಪರೀಕ್ಷಿಸಬಹುದು. ಆದರೆ ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಸರಣಿಯಾಗಿರುವುದರಿಂದ ರಾಹುಲ್ ಅಥವಾ ಬುಮ್ರಾ ನಾಯಕರಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ