ಫ್ಲಿಪ್ ಮಾಡೋ ಎಂದ ಸುನಿಲ್ ಗವಾಸ್ಕರ್: ರಿಷಭ್ ಪಂತ್ ಉತ್ತರ ಏನಿತ್ತು ವಿಡಿಯೋ ನೋಡಿ

Krishnaveni K

ಮಂಗಳವಾರ, 24 ಜೂನ್ 2025 (10:31 IST)
Photo Credit: X
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲೂ ಶತಕ ದಾಖಲಿಸಿದ ರಿಷಭ್ ಪಂತ್ ಹೊಸ ದಾಖಲೆ ಮಾಡಿದರು. ಶತಕ ಗಳಿಸಿದ ಬಳಿಕ ಬಾಲ್ಕನಿಯಿಂದ ಸುನಿಲ್ ಗವಾಸ್ಕರ್ ಪಲ್ಟಿ ಹೊಡೆಯುವಂತೆ ಸನ್ನೆ ಮಾಡಿದ್ದಾರೆ. ಇದಕ್ಕೆ ರಿಷಭ್ ಪಂತ್ ಉತ್ತರವೇನಿತ್ತು ವಿಡಿಯೋ ನೋಡಿ.

ಕಳೆದ ಐಪಿಎಲ್ ನಿಂದ ರಿಷಭ್ ಪಂತ್ ಶತಕ ಸಿಡಿಸಿದ ಬಳಿಕ ಸಮ್ಮರ್ ಸಾಲ್ಟ್ ಪಲ್ಟಿ ಮಾಡಿ ಸಂಭ್ರಮಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ ಬಳಿಕವೂ ಅವರು ಪಲ್ಟಿ ಹೊಡದು ಸಂಭ್ರಮಿಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು.

ಇದೀಗ ಎರಡನೇ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ ತಕ್ಷಣ ಅವರು ಫ್ಲಿಪ್ ಮಾಡಿ ಸಂಭ್ರಮಿಸಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವರು ಹಾಗೆ ಮಾಡಲಿಲ್ಲ. ತಕ್ಷಣ ಬಾಲ್ಕನಿಯಿಂದ ಸುನಿಲ್ ಗವಾಸ್ಕರ್ ಕೈ ಸನ್ನೆ ಮಾಡಿ ಪಲ್ಟಿ ಹೊಡೆಯುವಂತೆ ಕೇಳಿಕೊಂಡಿದ್ದಾರೆ.

ಆದರೆ ರಿಷಭ್ ನಗು ನಗುತ್ತಾ ಇದಕ್ಕೆ ಈಗ ಬೇಡ, ಇನ್ನೊಂದು ಸಲ ಮಾಡ್ತೀನಿ ಎಂದು ಸನ್ನೆ ಮಾಡಿದ್ದಾರೆ. ಈ ಇನಿಂಗ್ಸ್ ನಲ್ಲೂ ರಿಷಭ್ ಶತಕ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಒಂದೇ ಪಂದ್ಯದ ಎರಡೂ ಇನಿಂಗ್ಸ್ ನಲ್ಲಿ ಶತಕ ದಾಖಲಿಸಿದ ಭಾರತದ ಏಕೈಕ ವಿಕೆಟ್ ಕೀಪರ್ ಎಂಬ ದಾಖಲೆ ಮಾಡಿದರು.

Sunil Gavaskar asking Rishabh Pant to do Summersault celebration to which he replied next time for sure ????❤️ pic.twitter.com/mzCbugYDfT

— RP17 Gang™ (@RP17Gang) June 23, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ