ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಟೀಂ ಇಂಡಿಯಾ ರವಿಚಂದ್ರನ್ ಅಶ್ವಿನ್ ಮತ್ತು ರೋಹಿತ್ ಶರ್ಮಾ ಐಸಿಸಿ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.
9 ಸ್ಥಾನ ಏರಿಕೆ ಕಂಡಿರುವ ಹಿಟ್ ಮ್ಯಾನ್ ರೋಹಿತ್ ಶರ್ಮಾ 14 ನೇ ಸ್ಥಾನಕ್ಕೇರಿದ್ದಾರೆ. 2019 ರಲ್ಲಿ ರೋಹಿತ್ ಜೀವನಶ್ರೇಷ್ಠ 10 ನೇ ಸ್ಥಾನ ಪಡೆದಿದ್ದರು. ಆದರೆ ಅದಾದ ಬಳಿಕ ಅವರು ಕುಸಿತ ಕಂಡಿದ್ದರು. ಈಗ ಚೆನ್ನೈ ಟೆಸ್ಟ್ ಶತಕದ ಬಳಿಕ 14 ನೇ ಸ್ಥಾನಕ್ಕೇರಿದ್ದಾರೆ. ಇನ್ನು, ದ್ವಿತೀಯ ಟೆಸ್ಟ್ ನಲ್ಲಿ ಶತಕ ಮತ್ತು 8 ವಿಕೆಟ್ ಪಡೆದ ಅಶ್ವಿನ್ ಆಲ್ ರೌಂಡರ್ ಪಟ್ಟಿಯಲ್ಲಿ ಅಗ್ರ 5 ರೊಳಗೆ ಸ್ಥಾನ ಪಡೆದಿದ್ದಾರೆ. ಸತತವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾ ಬಂದಿರುವ ರಿಷಬ್ ಪಂತ್ 11 ನೇ ಸ್ಥಾನದಲ್ಲಿದ್ದಾರೆ.ಟೀಂ ಇಂಡಿಯಾ ನಾಯಕ 5 ನೇ ಸ್ಥಾನದಲ್ಲಿದ್ದರೆ, ಚೇತೇಶ್ವರ ಪೂಜಾರ 8 ನೇ ಸ್ಥಾನದಲ್ಲಿದ್ದಾರೆ. ಬೌಲರ್ ಗಳ ಪಟ್ಟಿಯಲ್ಲಿ ಅಶ್ವಿನ್ 7 ಮತ್ತು ಬುಮ್ರಾ 8 ನೇ ಸ್ಥಾನದಲ್ಲಿದ್ದಾರೆ.