ಕ್ಯಾಪ್ಟನ್ ರೋಹಿತ್ ಶರ್ಮಾಗೆ ಹ್ಯಾಪೀ ಬರ್ತ್ ಡೇ
ಹಿಟ್ ಮ್ಯಾನ್ ಎಂದೇ ಕರೆಯಿಸಿಕೊಳ್ಳುವ ರೋಹಿತ್ ಇಂದು 36 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ರೋಹಿತ್ ಹುಟ್ಟುಹಬ್ಬಕ್ಕೆ ಬೆಳಿಗ್ಗೆಯಿಂದಲೇ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡುತ್ತಿದ್ದಾರೆ.
ವಿಶೇಷವೆಂದರೆ ಇಂದು ಐಪಿಎಲ್ ನಲ್ಲಿ ರೋಹಿತ್ ಪಡೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಈ ಪಂದ್ಯದಲ್ಲಿ ಗೆದ್ದು ಕ್ಯಾಪ್ಟನ್ ರೋಹಿತ್ ಗೆ ಮುಂಬೈ ಗೆಲುವಿನ ಉಡುಗೊರೆ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.