ಐಪಿಎಲ್ 2023: ಮಾಜಿ ತಂಡ ಪಂಜಾಬ್ ವಿರುದ್ಧ ಸೆಣಸಲಿರುವ ಕೆಎಲ್ ರಾಹುಲ್

ಶುಕ್ರವಾರ, 28 ಏಪ್ರಿಲ್ 2023 (06:30 IST)
ಮೊಹಾಲಿ: ಐಪಿಎಲ್ 2023 ರಲ್ಲಿ ಇಂದು ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಹಳೇ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಆಡಲಿದೆ.

ರಾಹುಲ್ ಲಕ್ನೋಗೆ ಮೊದಲು ಪಂಜಾಬ್ ನಾಯಕರಾಗಿದ್ದರು. ಹೀಗಾಗಿ ಅವರಿಗೆ ಇದು ವಿಶೇಷ ಪಂದ್ಯ. ಲಕ್ನೋ ಇದುವರೆಗೆ 7 ಪಂದ್ಯಗಳಾಡಿ 4 ಗೆಲುವು ಕಂಡಿದೆ. ಆದರೆ ಕಳೆದ ಪಂದ್ಯದಲ್ಲಿ ಸೋತಿರುವ ಲಕ್ನೋ ಮರಳಿ ಗೆಲುವಿನ ಹಳಿಗೆ ಬರಬೇಕಿದೆ.

ಇನ್ನೊಂದೆಡೆ ಕಿಂಗ್ಸ್ ಪಂಜಾಬ್ ಕೂಡಾ 7 ಪಂದ್ಯಗಳಿಂದ 4 ಗೆಲುವು ಸಂಪಾದಿಸಿದೆ. ಕಳೆದ ಪಂದ್ಯದಲ್ಲಿ ಗೆದ್ದ ಉತ್ಸಾಹದಲ್ಲಿದೆ. ಖ್ಯಾತಿಗೆ ತಕ್ಕ ಆಟವಾಡಿದರೆ ಪಂಜಾಬ್ ಗೆ ಲಕ್ನೋ ಸೋಲಿಸುವುದು ಕಷ್ಟವೇನೂ ಆಗದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ