ತ್ರಿಕೋನ ಸರಣಿ ಗೆಲ್ಲುವ ಅಸಾಮಿಗಳು ನಾವಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದೇಕೆ?
ಮಂಗಳವಾರ, 6 ಮಾರ್ಚ್ 2018 (10:21 IST)
ಕೊಲೊಂಬೊ: ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡವನ್ನೊಳಗೊಂಡ ಟಿ 20 ಸರಣಿ ಇಂದಿನಿಂದ ಆರಂಭವಾಗುತ್ತಿದ್ದು, ನಾವು ಗೆಲ್ಲುವ ಕುದುರೆಗಳಲ್ಲ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ಸರಣಿಗೆ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ‘ಈ ಸರಣಿ ಗೆಲ್ಲುವ ಫೇವರಿಟ್ ಗಳು ನಾವೇ ಎಂದು ಹೇಳಿಕೊಳ್ಳುವುದಿಲ್ಲ. ಇದು ಚುಟುಕು ಕ್ರಿಕೆಟ್. ಇಲ್ಲಿ ಫಲಿತಾಂಶ ಏನಾಗುತ್ತದೆಂದು ಹೇಳಲಾಗದು. ಕೊನೆಯ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು. ಹಾಗಾಗಿ ನಾವೇ ಫೇವರಿಟ್ ಗಳು ಎಂದು ಹೇಳಲ್ಲ’ ಎಂದಿದ್ದಾರೆ ಹಂಗಾಮಿ ನಾಯಕ.
ಈ ನಡುವೆ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಧೋನಿ ಮುಂತಾದವರ ಅನುಪಸ್ಥಿತಿಯಲ್ಲೂ ತಂಡವನ್ನು ಮುನ್ನಡೆಸುವುದು ದೊಡ್ಡ ಗೌರವ ಎಂದಿದ್ದಾರೆ ರೋಹಿತ್.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ