ಐಪಿಎಲ್ 2023: ಶೂನ್ಯ ಸುತ್ತಿದ ರೋಹಿತ್ ಶರ್ಮಾ, ನೆಟ್ಟಿಗರಿಂದ ಟ್ರೋಲ್
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಮುಂಬೈ 18.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು.
ತಂಡ ಗೆಲುವು ಸಾಧಿಸಿದರೂ ರೋಹಿತ್ ಮಾತ್ರ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಇದರೊಂದಿಗೆ ಐಪಿಎಲ್ ನಲ್ಲಿ 15 ಬಾರಿ ಡಕೌಟ್ ಆದ ಕುಖ್ಯಾತಿಗೂ ಒಳಗಾದರು. ಇದರಿಂದಾಗಿ ರೋಹಿತ್ ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದ್ದಾರೆ.