ರೋಹಿತ್ ಅಬ್ಬರದ ಶತಕ: ಭಾರತ 309ಕ್ಕೆ 3 ವಿಕೆಟ್

ಮಂಗಳವಾರ, 12 ಜನವರಿ 2016 (12:43 IST)
ಪರ್ತ್:  ಪರ್ತ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಅಬ್ಬರ ಶತಕದಿಂದಾಗಿ ಭಾರತ 50 ಓವರುಗಳಲ್ಲಿ 309 ರನ್ ಮಾಡಿ ಮೂರು ವಿಕೆಟ್ ಕಳೆದುಕೊಂಡಿದೆ. ವಿರಾಟ್ ಕೊಹ್ಲಿ ಅಮೋಘ 91 ರನ್ ಮಾಡಿ ಶತಕವಂಚಿತರಾಗಿದ್ದರೆ, ರೋಹಿತ್ ಶರ್ಮಾ ಅಜೇಯ 171 ರನ್ ಗಳಿಸಿದರು. ಅವರ ಸ್ಕೋರಿನಲ್ಲಿ 13 ಬೌಂಡರಿಗಳು ಮತ್ತು 6 ಸಿಕ್ಸರ್‌ಗಳಿದ್ದವು.

ಆರಂಭದಲ್ಲೇ ಶಿಖರ್ ಧವನ್ ಔಟಾಗಿದ್ದರಿಂದ ಭಾರತ ಆಘಾತ ಅನುಭವಿಸಿತು.  ಕೊಹ್ಲಿ ಮತ್ತು ರೋಹಿತ್ ಉತ್ತಮ ದ್ವಿಶತಕದ ಜತೆಯಾಟವಾಡಿದರು.  ಎಂ.ಎಸ್. ಧೋನಿ 13 ಎಸೆತಗಳಲ್ಲಿ 18 ರನ್ ಬಾರಿಸಿದರು. ರವೀಂದ್ರ ಜಡೇಜಾ 10 ರನ್ ಬಾರಿಸಿ ಅಜೇಯರಾಗಿ ಉಳಿದರು.

 ಜೇಮ್ಸ್ ಫಾಕ್ನರ್ 2 ವಿಕೆಟ್ ಕಬಳಿಸಿದರೆ, ಹ್ಯಾಜಲ್‌ವುಡ್ ಒಂದು ವಿಕೆಟ್ ಗಳಿಸಿದರು. ಕೊಹ್ಲಿ ಫಾಕ್ನರ್ ಬೌಲಿಂಗ್‌ನಲ್ಲಿ ಫಿಂಚ್‌ಗೆ ಕ್ಯಾಚಿತ್ತು ಔಟಾದರು.  ಕೊಹ್ಲಿ ಸ್ಕೋರಿನಲ್ಲಿ 9 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇತ್ತು. 

ವೆಬ್ದುನಿಯಾವನ್ನು ಓದಿ