ಭಾರತ ಕ್ರಿಕೆಟ್ ತಂಡದ ಒಪೊ ಪ್ರಾಯೋಜಕತ್ವಕ್ಕೆ ಆರ್ ಎಸ್ ಎಸ್ ತಗಾದೆ

ಭಾನುವಾರ, 12 ಮಾರ್ಚ್ 2017 (08:37 IST)
ಮುಂಬೈ: ಭಾರತ ಕ್ರಿಕೆಟ್ ತಂಡಕ್ಕೆ ಸ್ಟಾರ್ ಇಂಡಿಯಾ ನಂತರ ಒಪೊ ಮೊಬೈಲ್ ಸಂಸ್ಥೆ ಅಧಿಕೃತ ಪ್ರಾಯೋಜಕರಾಗಿ ಆಯ್ಕೆಯಾಗಿದೆ. ಆದರೆ ಇದನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ವಿರೋಧಿಸಿದ್ದಾರೆ.

 
ಆರ್ ಎಸ್ ಎಸ್ ಗೂ ಕ್ರಿಕೆಟ್ ಗೂ ಎತ್ತಣ ಸಂಬಂಧ ಅಂತ ನೀವಂದುಕೊಳ್ಳಬಹುದು. ಆದರೆ ಒಪೊ ಸಂಸ್ಥೆಯ ವಿರುದ್ಧ ಆರ್ ಎಸ್ ಎಸ್ ತಗಾದೆ ತೆಗೆದಿದೆ. ಒಪೊ ಚೀನಾ ಮೂಲದ ಸಂಸ್ಥೆ. ಚೀನಾ ಮೂಲದ ಸಂಸ್ಥೆಗಳನ್ನು ವಿರೋಧಿಸುವ ಅಭಿಯಾನ ಕೈಗೊಂಡಿರುವ ಸಂಘ ಪರಿವಾರ ಈ ಸಂಸ್ಥೆ ಭಾರತೀಯ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ವಹಿಸುವುದನ್ನು ವಿರೋಧಿಸಿದೆ.

ಈ ನಿಟ್ಟಿನಲ್ಲಿ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದೆ. ಇದಕ್ಕಾಗಿ ಈಗಾಗಲೇ ಸಹಿ ಸಂಗ್ರಣೆ ಕೆಲಸವನ್ನೂ ಶುರು ಮಾಡಲಾಗಿದೆಯಂತೆ. ಹಾಗಾಗಿ ಒಪೊ ಪ್ರಾಯೋಜಕತ್ವವನ್ನು ಒಪ್ಪೋದಿಲ್ಲ ಎನ್ನುತ್ತಿದ್ದಾರೆ ಸಂಘ ಪರಿವಾರದವರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ