ಭಾರತಕ್ಕೆ ಬಂದಿಳಿದ ದ.ಆಫ್ರಿಕಾ ಪಡೆ

ಸೋಮವಾರ, 26 ಸೆಪ್ಟಂಬರ್ 2022 (08:00 IST)
ತಿರುವನಂತಪುರಂ: ಟೀಂ ಇಂಡಿಯಾ ವಿರುದ್ಧ ಟಿ20 ಮತ್ತು ಏಕದಿನ ಸರಣಿ ಆಡಲಿರುವ ಟೆಂಬಾ ಬವುಮಾ ನೇತೃತ್ವದ ದ.ಆಫ್ರಿಕಾ ಪಡೆ ಭಾರತಕ್ಕೆ ಬಂದಿಳಿದಿದೆ.

ಸೆಪ್ಟೆಂಬರ್ 28 ರಿಂದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿ ಟಿ20 ವಿಶ್ವಕಪ್ ದೃಷ್ಟಿಯಿಂದ ಎರಡೂ ತಂಡಕ್ಕೂ ಮಹತ್ವದ್ದಾಗಿದೆ.

ಇದಾದ ಬಳಿಕ ಅಕ್ಟೋಬರ್ 6 ರಿಂದ ಉಭಯ ತಂಡಗಳು ಏಕದಿನ ಸರಣಿ ಆಡಲಿವೆ. ಅಕ್ಟೋಬರ್ 11 ರಂದು ಸರಣಿ ಅಂತ್ಯವಾಗಲಿದೆ. ಮೊದಲ ಟಿ20 ಪಂದ್ಯ ತಿರುವನಂತಪುರಂನಲ್ಲಿ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ