ವಿರಾಟ್ ಕೊಹ್ಲಿ ಬಳಗಕ್ಕೆ ಎಚ್ಚರಿಕೆ ಸಂದೇಶ ನೀಡಿದ ದ.ಆಫ್ರಿಕಾ ವೇಗಿ ನಿಗಿಡಿ

ಸೋಮವಾರ, 20 ಮೇ 2019 (12:37 IST)
ಮುಂಬೈ: ಈ ಬಾರಿ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ದ.ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಸೆಣಸಲಿದ್ದು, ಇದಕ್ಕೂ ಮೊದಲು ಆಫ್ರಿಕಾ ವೇಗಿ ಲುಂಗಿ ನಿಗಿಡಿ ಟೀಂ ಇಂಡಿಯಾಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.


ಚೋಕರ್ ಗಳ ಹಣೆಪಟ್ಟಿ ಹೊಂದಿರುವ ಆಫ್ರಿಕಾ ತಂಡವನ್ನು ಪ್ರತೀ ಬಾರಿಯೂ ಎಲ್ಲಾ ತಂಡಗಳೂ ಕಡೆಗಣಿಸುವುದೇ ಹೆಚ್ಚು. ಆದರೆ ಆಫ್ರಿಕಾಗೆ ಕಳೆದ ಬಾರಿ ಟೀಂ ಇಂಡಿಯಾ ವಿರುದ್ಧ ಏಕದಿನ ಸರಣಿಯಲ್ಲಿ 1-5 ರಿಂದ ಸೋತ ಸೇಡಿದೆ.

ಕಳೆದ ಸರಣಿಯಲ್ಲಿ ಪ್ರಮುಖ ಆಟಗಾರರಿಲ್ಲದೇ ಆಫ್ರಿಕಾ ಸೊರಗಿತ್ತು. ಆದರೆ ವಿಶ್ವಕಪ್ ನಲ್ಲಿ ಈ ಎಲ್ಲಾ ಆಟಗಾರರೂ ಮರಳುವುದರಿಂದ ಟೀಂ ಇಂಡಿಯಾವನ್ನು ಸೋಲಿಸಲು ನಾವು ಶಕ್ತರಾಗಿದ್ದೇವೆ. ಭಾರತ ಸ‍ಶಕ್ತ ತಂಡವೇ ಇರಬಹುದು. ಆದರೆ ನಮ್ಮ ಪ್ರಮುಖ ಆಟಗಾರರ ಅನುಪಸ್ಥಿತಿಯಿಂದ ಅವರನ್ನು ಸೋಲಿಸುವುದು ನಮಗೆ ಕಷ್ಟವಾಗದು ಎಂದು ನಿಗಿಡಿ ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ