ಗಂಗೂಲಿಗೆ ಟೀಂ ಇಂಡಿಯಾದಲ್ಲಿ ಸುದೀರ್ಘ ಪಾತ್ರ ನೀಡುವುದಕ್ಕೆ ದಾಲ್ಮಿಯಾ ವಿರೋಧ?

ಬುಧವಾರ, 27 ಮೇ 2015 (10:59 IST)
ಮಾಜಿ ನಾಯಕ ಸೌರವ್ ಗಂಗೂಲಿ ಅವರನ್ನು  ರಾಷ್ಟ್ರೀಯ ಕ್ರಿಕೆಟ್ ತಂಡದ ಹೈ ಪರ್ಫಾರ್ಮೆನ್ಸ್ ಮ್ಯಾನೇಜರ್ ಹುದ್ದೆಗೆ ಹೆಸರಿಸುವ ನಿರೀಕ್ಷೆಯಿದೆ. ಆದರೆ ಅವರ ನೇಮಕ ಸುದೀರ್ಘಾವಧಿಗೆ ಇರುವುದಿಲ್ಲವೆಂದು ನಿರೀಕ್ಷಿಸಲಾಗಿದೆ. ಅದಕ್ಕೆ ಕಾರಣ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿ ಕೂಡ ಕೆಲಸ ನಿರ್ವಹಿಸುತ್ತಿರುವುದು. ಟೀಂ ಇಂಡಿಯಾವನ್ನು ಸುದೀರ್ಘ ಕಾಲ ಜತೆಗೂಡುವುದರಿಂದ ರಾಜ್ಯ ಸಂಸ್ಥೆಯಲ್ಲಿ ಅವರ ಕೆಲಸಕ್ಕೆ ಅಡ್ಡಿಯಾಗಬಹುದೆಂದು ಭಾವಿಸಲಾಗಿದೆ. 
 
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ದಾಲ್ಮಿಯಾ ಅವರನ್ನು ಸೋಮವಾರ ಅವರ ನಿವಾಸದಲ್ಲಿ ಭೇಟಿ ಮಾಡಿದರು. ಆದರೆ ಜೂನ್ 6ರೊಳಗೆ ಯಾವುದೇ ಔಪಚಾರಿಕ ಪ್ರಕಟಣೆಯನ್ನು ನಿರೀಕ್ಷಿಸುವಂತಿಲ್ಲ. 
 
 ಟೀಂ ಇಂಡಿಯಾ ಕೋಲ್ಕತಾಗೆ ಜೂನ್ 5ರಂದು ಬರುತ್ತದೆ. ಮರುದಿನ ಫಿಟ್ನೆಸ್ ಟೆಸ್ಟ್ ಇರುತ್ತದೆ. ತಂಡವು ಬಾಂಗ್ಲಾದೇಶಕ್ಕೆ ಜೂನ್ 7ರಂದು ತೆರಳುತ್ತದೆ. ಟೀಂ ಡೈರೆಕ್ಟರ್ ಮತ್ತು ಬೆಂಬಲ ಸಿಬ್ಬಂದಿಯ ಹೆಸರನ್ನು ಅಷ್ಟರೊಳಗೆ ಪ್ರಕಟಿಸಲಾಗುತ್ತದೆ ಎಂದು ಠಾಕುರ್ ಹೇಳಿದರು. 
 
 ಗಂಗೂಲಿ ಅವರ ಸಮೃದ್ಧ ಅನುಭವ ಟೀಮ್ ಇಂಡಿಯಾಗೆ ಮಾರ್ಗದರ್ಶನ ಮಾಡಲು ಸೂಕ್ತ ಅಭ್ಯರ್ಥಿಯನ್ನಾಗಿಸಿದೆ. ಠಾಕುರ್ ಕೂಡ ಅವರ ಪ್ರಯತ್ನಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ಭಾರತದ ಕ್ರಿಕೆಟ್‌ಗೆ ಸೌರವ್ ಉತ್ತಮ ಕೊಡುಗೆ ನೀಡಿದ್ದಾರೆ.  ನಾವು ಏನೇ ನಿರ್ಧರಿಸಿದರೂ  ಭಾರತೀಯ ಕ್ರಿಕೆಟ್‌ನ ಉತ್ತಮ ಹಿಸಾಸಕ್ತಿಯನ್ನು ಒಳಗೊಂಡಿರುತ್ತದೆ. ಆ ಬಗ್ಗೆ ನಿರ್ಧರಿಸಲು ನಮಗೆ ಕಾಲಾವಕಾಶ ನೀಡಿ ಎಂದು ಅವರು ಹೇಳಿದರು. 

ವೆಬ್ದುನಿಯಾವನ್ನು ಓದಿ