ಬಿಸಿಸಿಐ ಹುದ್ದೆಯಿಂದ ಸಚಿನ್, ಗಂಗೂಲಿ, ಲಕ್ಷ್ಮಣ್ ಗೆ ಕೊಕ್?!

ಬುಧವಾರ, 15 ಆಗಸ್ಟ್ 2018 (08:51 IST)
ಮುಂಬೈ: ಭಾರತ ಕ್ರಿಕೆಟ್ ತಂಡದ ಕೋಚ್ ಆಯ್ಕೆ ಮತ್ತು ಬಿಸಿಸಿಐ ಸಲಹಾ ಸಮಿತಿ ಸದಸ್ಯರಾಗಿರುವ ಮಾಜಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಸ್ಥಾನಕ್ಕೆ ಇದೀಗ ಕುತ್ತು ಬಂದಿದೆ.

ಈ ಮೂವರನ್ನೂ ಬಿಸಿಸಿಐ ಸಲಹಾ ಸಮಿತಿಯಿಂದ ವಜಾಗೊಳಿಸಲು ಚಿಂತನೆ ನಡೆದಿದೆ ಎಂದು ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ.

ಇದಕ್ಕೆ ಕಾರಣ, ಮೂವರೂ ಬಿಸಿಸಿಐ ಸಲಹಾ ಸಮಿತಿ ಅಲ್ಲದೆ, ಬೇರೆ ಲಾಭದಾಯಕ ಹುದ್ದೆಯಲ್ಲಿದ್ದಾರೆ ಎನ್ನುವುದಾಗಿದೆ. ಗಂಗೂಲಿ ಕೋಲ್ಕೊತ್ತಾ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದರೆ, ಲಕ್ಷ್ಮಣ್ ಹಲವು ಮಾಧ್ಯಮ ಮತ್ತು ಐಪಿಎಲ್ ನಲ್ಲಿ ಹುದ್ದೆ ಹೊಂದಿದ್ದಾರೆ. ಇನ್ನು, ಸಚಿನ್ ತೆಂಡುಲ್ಕರ್ ಗೆ ಪುತ್ರ ಅರ್ಜುನ್ ತೆಂಡುಲ್ಕರ್ ಅಂಡರ್ 19 ತಂಡದಲ್ಲಿರುವುದೇ ಮುಳುವಾಗಿದೆ.

ಇದೇ ಕಾರಣಕ್ಕೆ ಈ ಮೂವರೂ ನಿಯಮಾವಳಿಗಳ ಅನುಸಾರ ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾಗಲು ಅನರ್ಹರಾಗುತ್ತಾರೆ. ಇದೇ ಕಾರಣಕ್ಕೆ ಮೂರೂ ಕ್ರಿಕೆಟ್ ದಿಗ್ಗಜರೂ ತಮ್ಮ ಹುದ್ದೆ ಕಳೆದುಕೊಳ್ಳುವ ಸಾಧ್ಯತೆಯಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ