ಸಾರಾ ತೆಂಡೂಲ್ಕರ್ ಬಾಲಿವುಡ್ ಪ್ರವೇಶಿಸುತ್ತಿರುವ ವರದಿ ಕಪೋಲಕಲ್ಪಿತ: ಸಚಿನ್ ತೆಂಡೂಲ್ಕರ್

ಸೋಮವಾರ, 27 ಏಪ್ರಿಲ್ 2015 (15:51 IST)
ತಮ್ಮ ಪುತ್ರಿ ಸಾರಾ ತೆಂಡೂಲ್ಕರ್ ಬಾಲಿವುಡ್ ಚಿತ್ರಗಳಲ್ಲಿ ನಟಸುತ್ತಿದ್ದಾರೆ ಎನ್ನುವ ವರದಿಗಳು ಕಪೋಲಕಲ್ಪಿತ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಪುತ್ರಿ ಸಾರಾ ಶಿಕ್ಷಣ ಪಡೆಯುವುದರಲ್ಲಿ ಬಿಜಿಯಾಗಿದ್ದು, ಚಿತ್ರರಂಗವನ್ನು ಪ್ರವೇಶಿಸುವ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳು ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ.

17 ವರ್ಷ ವಯಸ್ಸಿನ ಸಾರಾ ತೆಂಡೂಲ್ಕರ್ ನಾಯಕ ನಟ ಶಾಹೀದ್ ಕಪೂರ್ ಅವರೊಂದಿಗೆ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಚಿನ್ ಚಿತ್ರದ ತುಂಬಾ ಆಸಕ್ತಿ ತೋರಿದ್ದಾರೆ ಎಂದು ಕೆಲ ಮಾಧ್ಯಮಗಳು ಪ್ರಕಟಿಸಿರುವುದು ಕ್ರಿಕೆಟ್ ಮತ್ತು ಬಾಲಿವುಡ್ ಜಗತ್ತಿನಲ್ಲಿ ಹೊಸ ಕ್ರೇಜ್ ಹುಟ್ಟಿಸಿದ್ದವು.  

ವರ್ಲ್ಡ್ ಸ್ಪೋರ್ಟ್ಸ್ ಗ್ರೂಪ್‌ನ ಬ್ರಾಂಡ್ ರಾಯಭಾರಿಯಾಗಿರುವ ಸಚಿನ್, ಸಂಸ್ಥೆಯ ಪರವಾಗಿ ಹೊಸತೊಂದು ಟೈಟಲ್ ಕುರಿತಂತೆ ಸಲಹೆ ನೀಡಿ ಎಂದು ತಮ್ಮ ಅಭಿಮಾನಿಗಳಲ್ಲಿ ಕೋರಿದ್ದರು.

ಲಂಡನ್ ಮೂಲದ ಲೇಖಕ ಮತ್ತು ಚಿತ್ರನಿರ್ದೇಶಕ ಜೇಮ್ಸ್ ಎರ್ಸ್‌ಕೈನ್, ಸಚಿನ್ ತೆಂಡೂಲ್ಕರ್‌ ಕುರಿತಂತೆ ನೆವರ್ ಸೀನ್ ಬಿಫೋರ್ ಫ್ಯಾಕ್ಟ್ಸ್ ಆಂಡ್ ಫೂಟೇಜ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.   

ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಹೊರತುಪಡಿಸಿ ಚಿತ್ರನಿರ್ಮಾಣ ಕುರಿತಂತೆ ಹೆಚ್ಚಿನ ಆಸಕ್ತಿ ವಹಿಸಿದ್ದರಿಂದ ಮಾಧ್ಯಮಗಳು ತಪ್ಪಾಗಿ ಅರ್ಥೈಸಿಕೊಂಡು ಪುತ್ರಿಯನ್ನು ಬಾಲಿವುಡ್ ಚಿತ್ರರಂಗಕ್ಕೆ ಪರಿಚಯಿಸುತ್ತಿರಬಹುದು ಎನ್ನುವ ಹಿನ್ನೆಲೆಯಲ್ಲಿ ವರದಿಗಳಿಗೆ ರೆಕ್ಕಪುಕ್ಕಗಳು ದೊರೆತಿವೆ.

ವೆಬ್ದುನಿಯಾವನ್ನು ಓದಿ