ವಿರಾಟ್ ಕೊಹ್ಲಿ ಮಾಡಿದ್ದನ್ನು ನೋಡಿ ಸಚಿನ್ ತೆಂಡುಲ್ಕರ್ ಕೂಡಾ ಫಾಲೋ ಮಾಡಿದರು!

ಸೋಮವಾರ, 4 ಜೂನ್ 2018 (09:26 IST)
ಮುಂಬೈ: ಭಾರತ ಫುಟ್ ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಫುಟ್ ಬಾಲ್ ಗೆ ಪ್ರೋತ್ಸಾಹ ನೀಡುವಂತೆ ಮಾಡಿದ ಟ್ವೀಟ್ ಗೆ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ ಬೆನ್ನಲ್ಲೇ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಕೂಡಾ ಧ್ವನಿಗೂಡಿಸಿದ್ದಾರೆ.

‘ನಮ್ಮನ್ನು ಬೈಯಿರಿ, ಟೀಕೆ ಮಾಡಿ.. ಏನೇ ಮಾಡಿ.. ಆದರೆ ನಾವು ಎಲ್ಲೇ ಹೋದರೂ ನಮಗೆ ಬೆಂಬಲ ಕೊಡಿ’ ಎಂದು ಸುನಿಲ್ ಚೆಟ್ರಿ ಭಾರತೀಯ ಫುಟ್ ಬಾಲ್ ಗೆ ಪ್ರೋತ್ಸಾಹ ನೀಡುವಂತೆ ಟ್ವೀಟ್ ಮಾಡಿದ್ದರು.

ಇದಕ್ಕೆ ಮೊದಲು ಪ್ರತಿಕ್ರಿಯಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ‘ನನ್ನ ಸ್ನೇಹಿತನಿಗೆ ಬೆಂಬಲ ಕೊಡಿ. ಭಾರತೀಯ ಫುಟ್ ಬಾಲ್ ನ್ನು ಪ್ರೋತ್ಸಾಹಿಸಿ’ ಎಂದು ತಮ್ಮ ಅಭಿಮಾನಿಗಳಿಗೆ ವಿಡಿಯೋ ಮೂಲಕ ಕೋರಿದ್ದರು. ಅದರ ಬೆನ್ನಲ್ಲೇ ಇದೀಗ ಸಚಿನ್ ತೆಂಡುಲ್ಕರ್ ಕೂಡಾ ವಿಡಿಯೋ ಸಂದೇಶ ನೀಡಿದ್ದು, ಭಾರತೀಯ ಫುಟ್ ಬಾಲ್ ನ್ನು ಪ್ರೋತ್ಸಾಹಿಸಲು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ