ಟೀ ಇಂಡಿಯಾ ಕೋಚ್‌ಗಾಗಿ ಸಚಿನ್ , ರಾಹುಲ್, ಗಂಗೂಲಿ ಬೇಟೆ

ಸೋಮವಾರ, 27 ಏಪ್ರಿಲ್ 2015 (11:56 IST)
ಕೋಲ್ಕತಾ: ಮಾಜಿ ಕ್ರಿಕೆಟ್ ತಾರೆಗಳಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರು ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಮತ್ತು ಬೆಂಬಲ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಮಿತಿಯಲ್ಲಿದ್ದಾರೆ.
 
ಮೂಲಗಳ ಪ್ರಕಾರ, ಈ ಮೂವರು ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಅನುರಾಗ್ ಠಾಕುರ್ ಅವರಿಗೆ ಮಾಹಿತಿಯನ್ನು ಒದಗಿಸಲಿದ್ದಾರೆ. ಮಂಡಳಿಯ ಕಾರ್ಯಕಾರಿ ಸಮಿತಿಯಲ್ಲಿ ಹೊಸ ಕೋಚ್ ಹುಡುಕುವ ಕೆಲಸವನ್ನು ಇವರಿಗೆ ವಹಿಸಲಾಯಿತು. 


ಜಿಂಬಾಬ್ವೆಯ ಡಂಕನ್ ಫ್ಲೆಚ್ಚರ್ ಅವರ ಗುತ್ತಿಗೆ ವಿಶ್ವಕಪ್ ಬಳಿಕ ಅಂತ್ಯಗೊಂಡಿದ್ದು, ಮಾಜಿ ಕ್ರಿಕೆಟರ್ ರವಿ ಶಾಸ್ತ್ರಿ ಟೀಂ ನಿರ್ದೇಶಕರಾಗಿ ತಂಡದಲ್ಲಿದ್ದಾರೆ. 
 ಸಹಾಯಕ ಕೋಚ್‌ಗಳಾದ ಸಂಜಯ್ ಬಂಗಾರ್, ಭರತ್ ಅರುಣ್ ಮತ್ತು ಆರ್. ಶ್ರೀಧರ್ ಅವರನ್ನು ಉಳಿಸಿಕೊಳ್ಳಲಾಗುತ್ತದೆಂದು ನಿರೀಕ್ಷಿಸಲಾಗಿದೆ. 
 
ಗಂಗೂಲಿ ಕೋಚ್ ಹುದ್ದೆಗೆ ರವಿ ಶಾಸ್ತ್ರಿ ಜೊತೆಗೆ ಪೈಪೋಟಿ ನೀಡಿದ್ದಾರೆಂಬ ಊಹಾಪೋಹ ದಟ್ಟವಾಗಿದ್ದು,  ಗಂಗೂಲಿ ಈ ಪ್ರತಿಷ್ಠಿತ ಹುದ್ದೆಗೆ ಸ್ಪರ್ಧಿಸುವುದಿಲ್ಲ ಎಂದು ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ. 
 
 ಸೌರವ್ ಸಮಿತಿಯಲ್ಲಿರುವುದರಿಂದ ತಾಂತ್ರಿಕವಾಗಿ ಕೋಚ್ ಹುದ್ದೆಗೆ ಅರ್ಹತೆ ಪಡೆದಿಲ್ಲ ಎಂದು ಸದಸ್ಯ ಹೇಳಿದರು. ಪ್ರಮುಖ ಕ್ರಿಕೆಟಿಗರನ್ನು ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿಯನ್ನು ರಚಿಸುವಂತೆ ಅಧ್ಯಕ್ಷ ದಾಲ್ಮಿಯಾ ಅವರಿಗೆ ಕಾರ್ಯಕಾರಿ ಸಮಿತಿ ಅಧಿಕಾರ ನೀಡಿದೆ.  ಕ್ರಿಕೆಟ್ ಆಟದಲ್ಲಿ ಒಟ್ಟಾರೆ ನಡವಳಿಕೆ ಮತ್ತು ಅಭಿವೃದ್ಧಿ ಬಗ್ಗೆ ಶಿಫಾರಸುಗಳನ್ನು ಹಂಚಿಕೊಳ್ಳಲಿದ್ದಾರೆ. 

ವೆಬ್ದುನಿಯಾವನ್ನು ಓದಿ