2007ರಲ್ಲಿ ಸೆಹ್ವಾಗ್ ನಿವೃತ್ತಿ ಘೋಷಣೆಯನ್ನು ಸಚಿನ್ ತಡೆದಿದ್ದರು

ಗುರುವಾರ, 29 ಅಕ್ಟೋಬರ್ 2015 (12:15 IST)
ತಾವು ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ನಿವೃತ್ತನಾಗಲು ಬಯಸಿದ್ದೆ. ಆದರೆ 2007ರಲ್ಲಿ ಭಾರತ ತಂಡದಿಂದ ತಮ್ಮನ್ನು ಡ್ರಾಪ್ ಮಾಡಿದಾಗ ಪ್ರಸಿದ್ಧ ಆಟಗಾರ ಸಚಿನ್ ತೆಂಡೂಲ್ಕರ್ ತನ್ನನ್ನು ತಡೆದರೆಂದು ಹಿರಿಯ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಹೇಳಿದರು. ಸೆಹ್ವಾಗ್ ಅವರು ಅಕ್ಟೋಬರ್ 20ರಂದು ಅಂತಿಮವಾಗಿ 37ನೇ ಹುಟ್ಟುಹಬ್ಬದಂದು ನಿವೃತ್ತರಾದರು. 
 
 
ಪ್ರತಿಯೊಬ್ಬ ಆಟಗಾರ ಅಂತಾರಾಷ್ಟ್ರೀಯ ಪಂದ್ಯದ ಉತ್ತುಂಗದಲ್ಲಿದ್ದಾಗ ನಿವೃತ್ತಿಯಾಗಲು ಬಯಸುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವಾಗಲೇ ನಿವೃತ್ತಿಯಾಗಿದ್ದರೆ, ನಾನು ನಿವೃತ್ತಿ ಭಾಷಣವನ್ನು ಮಾಡಬಹುದಿತ್ತು. ಆದರೆ ವಿಧಿ ಬೇರೆಯೇ ಬರೆದಿತ್ತು ಎಂದು ಸೆಹ್ವಾಗ್ ಖಾಸಗಿ ಸುದ್ದಿ ಚಾನೆಲ್‌ಗೆ ಹೇಳಿದರು. 
 
 2013ರ ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಬಳಿಕ ಭಾರತ ತಂಡದಿಂದ ಅವರನ್ನು ಡ್ರಾಪ್ ಮಾಡಲಾಗಿತ್ತು. ಆಯ್ಕೆದಾರರು ತಮಗೆ ಸಾಕಷ್ಟು ಅವಕಾಶಗಳನ್ನು ನೀಡದೇ ಕೆಲವು ವೈಫಲ್ಯಗಳ ಬಳಿಕ ಡ್ರಾಪ್ ಮಾಡಿದರೆಂದು ಅವರು ದೂರಿದರು. ಆಯ್ಕೆದಾರರು ನನ್ನನ್ನು ತೆಗೆಯುವ ಮುಂಚೆ ಭವಿಷ್ಯದ ಯೋಜನೆಯನ್ನು ಕೇಳಲಿಲ್ಲ. ಆಯ್ಕೆದಾರರು ನನ್ನನ್ನು ಮುಂದೆ ಆಡಿಸದಿರುವ ನಿರ್ಧಾರ ಹೇಳಿದ್ದರೆ, ಸರಣಿಯಲ್ಲಿ ನಾನು ವಿದಾಯವನ್ನು ಪ್ರಕಟಿಸುತ್ತಿದ್ದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟರು.
 
ಆದಾಗ್ಯೂ,  ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಅಂತಿಮ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ  ಹಿರಿಯ ಬ್ಯಾಟ್ಸ್‌ಮನ್ ಸೆಹ್ವಾಗ್‌ಗೆ ಅಧಿಕೃತ ವಿದಾಯ ನೀಡುವ ಕುರಿತು ಬಿಸಿಸಿಐ ಪರಿಶೀಲನೆ ನಡೆಸಿದೆ.

ವೆಬ್ದುನಿಯಾವನ್ನು ಓದಿ