ಬಾಲಿವುಡ್ ಖಾನ್ ನಟರ ಚಿತ್ರ ನಿಷೇಧಿಸಲು ಸಾಧ್ವಿ ಪ್ರಾಚಿ ಕರೆ

ಸೋಮವಾರ, 2 ಮಾರ್ಚ್ 2015 (12:25 IST)
ಹಿಂದೂಗಳು ಬಾಲಿವುಡ್  ಚಿತ್ರರಂಗದ ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಮುಂತಾದ ಖಾನ್ ನಟರ ಚಲನಚಿತ್ರಗಳನ್ನು ನಿಷೇಧಿಸಬೇಕು. ಏಕೆಂದರೆ ಅವು ಲವ್ ಜಿಹಾದ್‌ಗೆ ಉತ್ತೇಜಿಸುತ್ತಿವೆ ಎಂದು ಬಿಜೆಪಿ ಮುಖಂಡೆ ಸಾಧ್ವಿ ಪ್ರಾಚಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
 
 ಡೆಹ್ರಾಡನ್‌ನಲ್ಲಿ ನಡೆದ ವಿಎಚ್‌ಪಿ ಕಾರ್ಯಕ್ರಮದಲ್ಲಿ ಅವರ ಹೇಳಿಕೆ ಹೊರಬಿದ್ದಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಿಂದೂ ಕನ್ಯೆಯನ್ನು ವಿವಾಹವಾಗಬೇಕು ಎಂದೂ ಅವರು ಹೇಳಿದ್ದಾರೆ.ಸಾಧ್ವಿ ಪ್ರಾಚಿ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗಿದ್ದು ಇದೇ ಮೊದಲ ಬಾರಿಯಲ್ಲ. ಹಿಂದೂ ಮಹಿಳೆಯರು ತಲಾ ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು.

ಒಂದು ಮಗು ಗಡಿ ರಕ್ಷಣೆಗೆ, ಇನ್ನೊಂದು ಸಮಾಜದ ಸೇವೆಗೆ, ಇನ್ನೊಂದನ್ನು ಸಂತನಿಗೆ ಮತ್ತು ಒಂದನ್ನು ವಿಎಚ್‌ಪಿಗೆ ನೀಡಲು ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಹೇಳುವ ಮೂಲಕ ವಿವಾದದ ಕಿಡಿ ಸೃಷ್ಟಿಸಿದ್ದರು. ರಾಷ್ಟ್ರಕ್ಕೆ ಅಗತ್ಯವಾದ್ದರಿಂದ ಹಾಗೆ ಹೇಳಿದ್ದಾಗಿ ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದರು. 

ವೆಬ್ದುನಿಯಾವನ್ನು ಓದಿ