ಐಪಿಎಲ್ ವೇಳೆ ಬೆಟ್ಟಿಂಗ್ ನಡೆಸಿ ಸಿಕ್ಕಿಬಿದ್ದ ಸಲ್ಮಾನ್ ಖಾನ್ ಸಹೋದರ

ಶನಿವಾರ, 2 ಜೂನ್ 2018 (09:45 IST)
ಮುಂಬೈ: ಈ ಐಪಿಎಲ್ ಆವೃತ್ತಿಯಲ್ಲಿ ಕುಖ್ಯಾತ ಬುಕಿಗಳೊಂದಿಗೆ ಸೇರಿಕೊಂಡು ಕೋಟಿಗಟ್ಟಲೆ ರೂ. ಬೆಟ್ಟಿಂಗ್ ನಡೆಸಿದ ಆರೋಪಕ್ಕೆ ಸಲ್ಮಾನ್ ಖಾನ್ ಸಹೋದರ, ನಿರ್ದೇಶಕ ಅರ್ಬಾಜ್ ಖಾನ್ ಸಿಲುಕಿದ್ದಾರೆ.

ಕುಖ್ಯಾತ ಬುಕಿ ಸೋನು ಜಲಾನ್ ಜತೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆಸಿದ ಆರೋಪ ಅರ್ಬಾಜ್ ವಿರುದ್ಧ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಅರ್ಬಾಜ್ ಗೆ ಸಮನ್ಸ್ ಜಾರಿ ಮಾಡಲಾಗಿದೆ.

ಈ ಕುರಿತು ಈಗಾಗಲೇ ಪೊಲೀಸರು ತನಿಖೆ ಆರಂಭಿಸಿದ್ದು, ಸೋನು ಜಲಾನ್ ಜತೆ ಸೇರಿಕೊಂಡು ಅರ್ಬಾಜ್ ಸುಮಾರು 2.8 ಕೋಟಿ ರೂ.ಗಳಷ್ಟು ಬೆಟ್ಟಿಂಗ್ ನಡೆಸಿ ನಷ್ಟ ಅನುಭವಿಸಿರುವುದಾಗಿ ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ