ದುಬೈ: ಏಷ್ಯಾಅ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬೇರೆ ಬೇರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುತ್ತಿರುವ ಬಗ್ಗೆ ಟೀಂ ಇಂಡಿಯಾ ಬ್ಯಾಟಿಗ ಸಂಜು ಸ್ಯಾಮ್ಸನ್ ವಿಭಿನ್ನ ಉತ್ತರ ನೀಡಿದ್ದು ಈಗ ಈ ವಿಡಿಯೋ ಸಖತ್ ವೈರಲ್ ಆಗಿದೆ.
ಮೈದಾನದಲ್ಲಿ ಸಂದರ್ಶಕರು ಸಂಜು ಸ್ಯಾಮ್ಸನ್ ಗೆ ನೀವು ಬೇರೆ ಬೇರೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುತ್ತೀರಿ. ಆದರೆ ನಿಮಗೆ ಬೆಸ್ಟ್ ಎಂದು ಅನಿಸುವ ಬ್ಯಾಟಿಂಗ್ ಕ್ರಮಾಂಕ ಯಾವುದು ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿರುವ ಸಂಜು ಸ್ಯಾಮ್ಸನ್ ಇತ್ತೀಚೆಗೆ ಮಲಯಾಳಂ ಸಿನಿಮಾ ರಂಗದ ದಿಗ್ಗಜ ನಟ ಮೋಹನ್ ಲಾಲ್ ಗೆ ತಮ್ಮ 40 ವರ್ಷದ ಸಿನಿ ಬದುಕಿನ ಸಾಧನೆಗೆ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ ಸಿಕ್ಕಿತು. ಅವರು ತಮ್ಮ ಸಿನಿ ವೃತ್ತಿ ಜೀವನದಲ್ಲಿ ಹಲವು ಬಗೆಯ ವೇಷ ಧರಿಸಿದ್ದರು. ಪಾತ್ರ ಏನು ಬಯಸುತ್ತದೆಯೋ ಅದೇ ರೀತಿಯ ಅಭಿನಯ ಮಾಡಿದರು.
ನಾನೂ ಹಾಗೆಯೇ 10 ವರ್ಷದಿಂದ ಕ್ರಿಕೆಟ್ ಆಡುತ್ತಿದ್ದೇನೆ. ನನ್ನ ತಂಡಕ್ಕೆ ಏನು ಅಗತ್ಯವೋ ಅದನ್ನು ನಿಭಾಯಿಸಬೇಕಾಗುತ್ತದೆ. ನಾನು ಹೀರೋನೂ ಆಗ್ತೀನಿ, ವಿಲನ್ ಕೂಡಾ ಆಗ್ರೀನಿ. ಕೆಲವೊಮ್ಮೆ ಜೋಕರ್ ಕೂಡಾ ಆಗಬೇಕಾಗುತ್ತದೆ. ಒಂಥರಾ ನಾನು ಸಂಜು ಮೋಹನ್ ಲಾಲ್ ಸ್ಯಾಮ್ಸನ್ ಎಂದು ತಮಾಷೆ ಮಾಡಿದ್ದಾರೆ. ಅವರ ಈ ಉತ್ತರದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.