ಸಂಜು ಸ್ಯಾಮ್ಸನ್ ಗೆ ಯಾಕೆ ಆ ಬ್ಯಾಟಿಂಗ್ ಕೊಟ್ರಿ: ಸೂರ್ಯಕುಮಾರ್ ಯಾದವ್ ಸ್ಪಷ್ಟನೆ
 
ಮೂರನೇ ಕ್ರಮಾಂಕದಲ್ಲಿ ಶಿವಂ ದುಬೆ ಬ್ಯಾಟಿಂಗ್ ಬಂದರು. ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಐದನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಗೆ ಬಂದರು. ಕೊನೆಗೂ ಸಂಜು ಬ್ಯಾಟಿಂಗ್ ಗಿಳಿದೇ ಇರಲಿಲ್ಲ.
									
				ಈ ಬಗ್ಗೆ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಪಂದ್ಯ ಮುಗಿದ ಬಳಿಕ ಸ್ಪಷ್ಟನೆ ನೀಡಿದ್ದಾರೆ. ಬಾಂಗ್ಲಾದೇಶದ ಬೌಲಿಂಗ್ ಲೈನ್ ಅಪ್ ನೋಡಿದಾಗ ಎಡಗೈ ಸ್ಪಿನ್ನರ್ ಮತ್ತು ಲೆಗ್ ಸ್ಪಿನ್ನರ್ ಗಳಿದ್ದರು. ಅವರಿಗೆ ಶಿವಂ ದುಬೆ ಬೆಸ್ಟ್ ಎನಿಸಿತು. ಅದಕ್ಕೇ ಅವರನ್ನು ಕಣಕ್ಕಿಳಿಸಲಾಯಿತು ಎಂದಿದ್ದಾರೆ.