ಸಾವಿರ ರನ್ ಸರದಾರ ಪ್ರಣವ್‌ಗೆ ಎಂಸಿಎ ವಿದ್ಯಾರ್ಥಿವೇತನ

ಬುಧವಾರ, 6 ಜನವರಿ 2016 (18:50 IST)
ಮುಂಬೈನ ಶಾಲಾ ಬಾಲಕ ಪ್ರಣವ್ ಧನವಾಡೆ ಬಂಡಾರಿ ಕಪ್ ಅಂತರಶಾಲಾ ಕ್ರಿಕೆಟ್‌ನಲ್ಲಿ  1009 ರನ್ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ ಬಳಿಕ ಮುಂಬೈ ಕ್ರಿಕೆಟ್ ಸಂಸ್ಥೆ ಮರುದಿನವೇ ಪ್ರಣವ್ ಧನವಾಡೆಗೆ  ಮಾಸಿಕ 10,000 ರೂ. ಸ್ಕಾಲರ್‌ಶಿಪ್ ಪ್ರಕಟಿಸಿದೆ. 
 
ಈ ವಿದ್ಯಾರ್ಥಿವೇತನವನ್ನು 5 ವರ್ಷಗಳ ಅವಧಿಗೆ 2016ರಿಂದ 2021ರವರೆಗೆ ನೀಡಲಾಗುತ್ತದೆ. ಸಂಸ್ಥೆಯು ಪ್ರಣವ್ ಧನವಾಡೆ ಅವರ ಕ್ರಿಕೆಟಿಂಗ್ ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ನಿಗಾ ವಹಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ. 
 
 15 ವರ್ಷ ವಯಸ್ಸಿನ ಬಾಲಕ ಕೆಸಿ ಗಾಂಧಿ ಶಾಲೆಯ ಪರವಾಗಿ 395 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿ 59 ಸಿಕ್ಸರ್ ಮತ್ತು 129 ಬೌಂಡರಿ ಬಾರಿಸುವ ಮೂಲಕ ಅಜೇಯನಾಗಿ ಉಳಿದಿದ್ದ. ಶಾಲಾ ತಂಡ 3 ವಿಕೆಟ್‌ಗೆ 1465ಕ್ಕೆ ಡಿಕ್ಲೇರ್ ಮಾಡಿಕೊಂಡಾಗ ಅವನ ಸ್ಫೋಟಕ ಬ್ಯಾಟಿಂಗ್ ಅಂತ್ಯಗೊಂಡಿತ್ತು. 
 ಪ್ರಣವ್ ಈಗ ಯಾವುದೇ ಸ್ವರೂಪದ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಹೊಂದಿದ್ದಾನೆ. 

ವೆಬ್ದುನಿಯಾವನ್ನು ಓದಿ