ದ್ವಿತೀಯ ಟೆಸ್ಟ್: ವಿರಾಟ್ ಕೊಹ್ಲಿ-ಚೇತೇಶ್ವರ ಪೂಜಾರಾ ದಾಖಲೆಗಳು

ಶುಕ್ರವಾರ, 18 ನವೆಂಬರ್ 2016 (08:47 IST)
ವಿಶಾಖಪಟ್ಟಣಂ: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮ್ಯಾರಥಾನ್ ಇನಿಂಗ್ಸ್ ಕಟ್ಟಿದ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಕೆಲವು ನೂತನ ದಾಖಲೆಗಳನ್ನು ಬರೆದಿದ್ದಾರೆ.

226 ರನ್ ಗಳ ಬೃಹತ್ ಜತೆಯಾಟವಾಡಿದ ಅವರು ನಾಲ್ಕನೇ ಬಾರಿಗೆ 100 ಪ್ಲಸ್ ರನ್ ಜತೆಯಾಟವಾಡಿದ ದಾಖಲೆ ಮಾಡಿದರು. ಅಲ್ಲದೆ ಇವರಿಬ್ಬರು ಈ ಮೊದಲು 2013 ರಲ್ಲಿ ದ.ಆಫ್ರಿಕಾ ವಿರುದ್ಧ ಮಾಡಿದ 222 ರನ್ ಗಳ ಜತೆಯಾಟದ ದಾಖಲೆಯನ್ನು ಮುರಿದರು.

ವೈಯಕ್ತಿಕವಾಗಿ ಚೇತೇಶ್ವರ ಪೂಜಾರ 10 ನೇ ಶತಕ ದಾಖಲಿಸಿದರಲ್ಲದೆ, ಇದುವರೆಗೆ ಅತೀ ಹೆಚ್ಚು ಬಾರಿ 90 ಪ್ಲಸ್ ರನ್ ಮಾಡಿದ ಮೇಲೆ ಔಟಾಗದೇ ಶತಕ ಪೂರ್ತಿಗೊಳಿಸಿದ ದಾಖಲೆ ಮಾಡಿದರು. ಡಾನ್ ಬ್ರಾಡ್ಮನ್, ಮೈಕಲ್ ವಾನ್, ಇಯಾನ್ ಬೋಥ್, ಪಾಲಿ ಉಮ್ರಿಗರ್ ಮತ್ತು ಇಜಾಜ್ ಅಹಮದ್ ಮಾತ್ರ ಈ ದಾಖಲೆ ಮಾಡಿ ಪೂಜಾರಗಿಂತ ಮೊದಲ ಸ್ಥಾನಗಳಲ್ಲಿದ್ದಾರೆ.

ಅಲ್ಲದೆ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅತೀ ಹೆಚ್ಚು ಎಡಗೈ ಬ್ಯಾಟ್ಸ್ ಮನ್ ಗಳನ್ನು ಹೊಂದಿದ ದಾಖಲೆ ಮಾಡಿತು. ಪ್ರಸ್ತುತ ಆಡುತ್ತಿರುವ ಹನ್ನೊಂದರ ಬಳಗದಲ್ಲಿ 7 ಬ್ಯಾಟ್ಸ್ ಮನ್ ಗಳು ಎಡಚರು ಎಂಬುದು ವಿಶೇಷ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ