ದ್ವಿತೀಯ ಟೆಸ್ಟ್: ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಶತಕ

ಗುರುವಾರ, 17 ನವೆಂಬರ್ 2016 (15:12 IST)
ವಿಶಾಖ ಪಟ್ಟಣಂ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿರುವ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಕುಸಿಯುತ್ತಿದ್ದ ಟೀಂ ಇಂಡಿಯಾವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದಿದ್ದಾರೆ.

ಇಬ್ಬರೂ ಒಂದೇ ಓವರ್ ಅಂತರದಲ್ಲಿ ಶತಕ ಗಳಿಸಿದ್ದು ವಿಶೇಷವಾಗಿತ್ತು. 22 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಇಬ್ಬರೂ ಜತೆಯಾದರು. ಸದಾ ತಾಳ್ಮೆಯ ಆಟವಾಡುವ ಚೇತೇಶ್ವರ ಪೂಜಾರ 99 ರನ್ ಗಳಿಸಿದ್ದಾಗ ಸಿಕ್ಸ್ ಹೊಡೆದು ಶತಕ ಪೂರ್ತಿ ಮಾಡಿದ್ದು ವಿಶೇಷವಾಗಿತ್ತು. 193 ಎಸೆತಗಳಲ್ಲಿ ಅವರು ಶತಕ ಪೂರ್ತಿಗೊಳಿಸಿದರು.

ನಂತರ ವಿರಾಟ್ ಕೊಹ್ಲಿ ಕೂಡಾ ತಮ್ಮ ಎಂದಿನ ಆಟವಾಡಿ ಮತ್ತೊಂದು ಶತಕ ದಾಖಲಿಸಿದರು. ಅವರು 156 ಬೌಲ್ ಗಳಲ್ಲಿ ಶತಕ ದಾಖಲಿಸಿದರು. ಇಬ್ಬರೂ ಮೂರನೇ ವಿಕೆಟ್ ಗೆ 200 ಪ್ಲಸ್ ರನ್ ಜತೆಯಾಟವಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ