ದ್ವಿತೀಯ ಟೆಸ್ಟ್: ದ್ವಿತೀಯ ಇನಿಂಗ್ಸ್ ನಲ್ಲಿ ಕುಸಿದ ಭಾರತಕ್ಕೆ ಮತ್ತೆ ವಿರಾಟ್ ಕೊಹ್ಲಿ ಆಸರೆ

ಶನಿವಾರ, 19 ನವೆಂಬರ್ 2016 (16:42 IST)
ವಿಶಾಖ ಪಟ್ಟಣಂ: ಪ್ರವಾಸಿ ಇಂಗ್ಲೆಂಡ್ ವಿರುದ್ದ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಂತ್ಯಕ್ಕೆ ಟೀಂ ಇಂಡಿಯಾ 3 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ. ಇದರೊಂದಿಗೆ ಅತಿಥೇಯ ತಂಡ 298 ರನ್ ಮುನ್ನಡೆ ಪಡೆದಿದೆ.

ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತಕ್ಕೆ ಶುರುವಿನಲ್ಲೇ ಆಘಾತ ನೀಡಿದವರು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್. ಕೇವಲ 17 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಅವರು ಪೆವಿಲಿಯನ್ ಗೆ ಅಟ್ಟಿದ್ದರು. ಅಷ್ಟರಲ್ಲಿ ಜತೆಯಾದ ಮೊದಲ ಇನಿಂಗ್ಸ್ ಜೋಡಿ ಕೊಹ್ಲಿ-ಚೇತೇಶ್ವರ ಪೂಜಾರ ಮತ್ತೊಂದು ಅದ್ಭುತ ಇನಿಂಗ್ಸ್ ಕಟ್ಟುವ ಮೊದಲೇ ಜೇಮ್ಸ್ ಆಂಡರ್ಸನ್ ಪೂಜಾರರನ್ನು ತಮ್ಮ ಬಲೆಗೆ ಬೀಳಿಸಿದರು. ಅಲ್ಲಿಗೆ ಭಾರತದ ಸ್ಕೋರ್ 40 ಕ್ಕೆ 3 ಆಗಿತ್ತು.

ಆಗ ಕೊಹ್ಲಿ ಜತೆ ಕೂಡಿಕೊಂಡ ಅಜಿಂಕ್ಯ ರೆಹಾನೆ ಮುರಿಯದ ನಾಲ್ಕನೇ ವಿಕೆಟ್ ಗೆ 58 ರನ್ ಒಟ್ಟುಗೂಡಿಸಿದ್ದಾರೆ. ಕೊಹ್ಲಿ ಮತ್ತೊಂದು ಅಮೋಘ ಇನಿಂಗ್ಸ್ ಆಡುವ ಸೂಚನೆ ನೀಡಿದ್ದು ಈಗಾಗಲೇ 56 ರನ್ ಹೊಡೆದಿದ್ದಾರೆ. ಅವರ ಜತೆಗಾರ ರೆಹಾನೆ 22 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ನಾಳೆ ಆದಷ್ಟು ಬೇಗ ಟೀಂ ಇಂಡಿಯಾ ಆದಷ್ಟು ಬೇಗ ರನ್ ಗುಡ್ಡೆ ಹಾಕಿ ಇಂಗ್ಲೆಂಡ್ ತಂಡವನ್ನು ಆದಷ್ಟು ಬೇಗ ಆಲೌಟ್ ಮಾಡಬೇಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ