ಪಾಕಿಸ್ತಾನದ ಪರ ಆಡಿದ ಮೋಸ್ಟ್ ಡೇಂಜರಸ್ ಬ್ಯಾಟ್ಸ್`ಮನ್`ಗಳಲ್ಲಿ ಶಾಹಿದ್ ಅಫ್ರಿದಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಬೂಮ್ ಬೂಮ್ ಅಫ್ರಿದಿ ಎಂದೇ ಅಭಿಮಾನಿಗಳು ಕರೆಯುತ್ತಾರೆ. ಅತಿ ವೇಗದ ಸೆಂಚುರಿ ದಾಖಲೆ ಹಲವು ವರ್ಷಗಳ ಕಾಲ ಅಫ್ರಿದಿ ಹೆಸರಲಿತ್ತು. ಇಂಥಾ ಅನುಭವಿ ಕ್ರಿಕೆಟಿಗನಿಗೆ ಎಲ್`ಬಿಡಬ್ಲ್ಯೂ ಗೊತ್ತಿಲ್ಲವೇ..?
2 ದಶಕಗಳ ಕಾಲ ಸುದೀರ್ಘ ಕ್ರಿಕೆಟ್ ಆಡಿರುವ ಶಾಹಿದ್ ಅಫ್ರಿದಿಗೆ ಲೆಗ್ ಬಿಫೋರ್ ವಿಕೆಟ್ ಬಗ್ಗೆ ಗೊತ್ತಿಲ್ಲವೇ..? ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ ಅಫ್ರಿದಿ ಲೆಗ್ ಬಿಫೋರ್ ವಿಕೆಟ್ ಅರ್ಥ ಮಾಡಿಕೊಳ್ಳಲಾಗದೇ ಪರದಾಡಿರುವುದು ವೈರಲ್ ಆಗಿದೆ.
ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಅಭಿನಯ ಮಾಡಿ ತೋರಿಸುವುದನ್ನ ಗುರುತಿಸುವ ಗೇಮ್`ನಲ್ಲಿ ಪಾಲ್ಗೊಂಡ ಶಾಹಿದ್ ಅಫ್ರಿದಿ, ನಿರೂಪಕ ಬ್ಯಾಟಿಂಗ್, ಲೆಗ್ ಬಿಫೋರ್ ವಿಕೆಟ್ ಬಗ್ಗೆ ಎಷ್ಟೇ ಸನ್ನೆ ಮಾಡಿದರೂ ಅಫ್ರಿದಿಗೆ ಗುರ್ತಿಸಲು ಸಾಧ್ಯವಾಗಲೇ ಇಲ್ಲ. ಲೆಗ್ ಬಿಫೋರ್ ಗೇಮ್ ಎಂದ ಅಫ್ರಿಧಿ ನಗೆಪಾಟಲಿಗೀಡಾದರು.
ಶಾಹಿದ್ ಅಫ್ರಿದಿ ಪಾಕಿಸ್ತಾನ ಪರ 398 ಏಕದಿನ ಪಂದ್ಯ,98 ಟಿ-20 ಮತ್ತು 27 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.