ಧೋನಿ-ಯುವರಾಜ್ ಸಿಂಗ್ ಆಟಕ್ಕೆ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಹೊಗಳಿದ ಪರಿಯಿದು

ಶನಿವಾರ, 21 ಜನವರಿ 2017 (08:48 IST)
ಮುಂಬೈ: ದ್ವಿತೀಯ ಏಕದಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ಮತ್ತು ಧೋನಿ ನಡೆಸಿದ ಬ್ಯಾಟಿಂಗ್  ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಇಬ್ಬರ ಜೋಡಿಗೆ ವಿಶೇಷ ವ್ಯಕ್ತಿಯೊಬ್ಬರು ವಿಶೇಷ ಸಂದೇಶ ನೀಡಿದ್ದಾರೆ. ಅವರೇ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್.
 

ಯುವಿ-ಧೋನಿ ಶತಕ ದಾಖಲಿಸುತ್ತಿದ್ದಂತೆ ಟ್ವೀಟ್ ಮಾಡಿದ ಶಾರುಖ್ “ಯುವಿ-ಧೋನಿ ಬ್ಯಾಟಿಂಗ್ ಮಾಡುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ. ನಿಜವಾಗ್ಲೂ ಶೇರೋಂ ಕಾ ಝಮಾನಾ ಹೇ” ಎಂದಿದ್ದರು. ಇದನ್ನು ಸಂಜಯ್ ಮಂಜ್ರೇಕರ್ ತಮ್ಮ ಕಾಮೆಂಟರಿಯಲ್ಲಿ ಉಲ್ಲೇಖಿಸಿದ್ದನ್ನು ಗಮನಿಸಿದ ಶಾರುಖ್ ಸಂಜಯ್ ಗೆ ಧನ್ಯವಾದ ತಿಳಿಸಿದ್ದಲ್ಲದೆ ಮತ್ತೊಂದು ಕಮೆಂಟ್ ಪ್ರಕಟಿಸಿದರು.

ಆ ಟ್ವೀಟ್ ನಲ್ಲಿ ಶಾರುಖ್ ಸಿನಿಮಾ ಶೈಲಿಯಲ್ಲಿ ಯುವಿ-ಧೋನಿಗಾಗಿ ವಿಶೇಷ ಡೈಲಾಗ್ ಹೇಳಿದ ಧ್ವನಿ ಮುದ್ರಿಕೆಯಿದೆ. ಅಂತೂ ಬಾಲಿವುಡ್ ಗೆ ನಿಕಟವರ್ತಿಗಳಾಗಿರುವ ಯುವಿ-ಧೋನಿಗೆ ಬಾದ್ ಶಹಾನಿಂದಲೇ ಹೊಗಳಿಸಿಕೊಳ್ಳುವ ಯೋಗ ನೋಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ