ಟೀಂ ಇಂಡಿಯಾ ಆಟಗಾರರಿಗೆ ಅವಮಾನ: ಅರ್ಧ ತಲೆ ಬೋಳಿಸಿದ ಜಾಹಿರಾತು

ಮಂಗಳವಾರ, 30 ಜೂನ್ 2015 (13:37 IST)
ಬಾಂಗ್ಲಾದೇಶದ ವಿರುದ್ಧ ಏಕ ದಿನ ಸರಣಿಯಲ್ಲಿ 1-2ರಿಂದ ಸರಣಿಯನ್ನು ಸೋತ ಭಾರತೀಯ ತಂಡದ ಧೋನಿ ಮತ್ತಿತರ ಆಟಗಾರರ ಅರ್ಧಬೋಳಿಸಿದ ತಲೆಯ ಜಾಹಿರಾತನ್ನು ಬಾಂಗ್ಲಾದೇಶದ ಪತ್ರಿಕೆಯೊಂದು ಪ್ರಕಟಿಸುವ ಮೂಲಕ ಸೋಮವಾರ ಅವಮಾನ ಮಾಡಿದೆ. ಬಾಂಗ್ಲಾ ಸುದ್ದಿಪತ್ರಿಕೆ ಪ್ರೊತೋಮ್ ಅಲೊ ತನ್ನ ಸೋಮವಾರದ ಆವೃತ್ತಿಯಲ್ಲಿ ಇಂತಹ ಕೆಟ್ಟ ಅಭಿರುಚಿಯ ಜಾಹಿರಾತನ್ನು ಪ್ರಕಟಿಸುವ ಮೂಲಕ ಭಾರತೀಯ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದೆ.
 
 
3 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿದ ಮುಸ್ತಫಿಜುರ್ ಜಾಹಿರಾತಿನಲ್ಲಿ ಕಟರ್ ಹಿಡಿದುಕೊಂಡಿದ್ದು, ಅವರ ಕೆಳಗೆ ರಹಾನೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ, ಧೋನಿ, ಶಿಖರ್ ಧವನ್ ಮತ್ತು ಆರ್. ಅಶ್ವಿನ್ ಬ್ಯಾನರ್ ಹಿಡಿದು ನಾವು ಅದನ್ನು ಬಳಸಿದ್ದೇವೆ, ನೀವೂ ಬಳಸಬಹುದು ಎಂಬ ಉಪಶೀರ್ಷಿಕೆ ಹೊಂದಿದೆ.

ಮುಸ್ತಫಿಜುರ್ ಚಿತ್ರದ ಪಕ್ಕದಲ್ಲಿ, ಟೈಗರ್ ಸ್ಟೇಷನರಿ, ಮೇಡ್ ಇನ್ ಬಾಂಗ್ಲಾದೇಶ್, ಮುರ್ತಫಿಜ್ ಕಟ್ಟರ್ ಮಿರ್‌ಪುರದ ಸ್ಟೇಡಿಯಂ ಮಾರ್ಕೆಟ್‌‍ನಲ್ಲಿ ಲಭ್ಯವಿದೆ. ಕಟ್ಟರ್ ಉಲ್ಲೇಖವು ಮುಸ್ತಫಿಜುರ್ ಆಫ್ ಕಟ್ಟರ್‌ನಿಂದ ಮಾಡಲಾಗಿದ್ದು, ಭಾರತೀಯ ಬ್ಯಾಟ್ಸ್‌ಮನ್‌ಗಳು ಇವುಗಳಿಂದ ವಂಚಿತರಾಗಿ ಔಟಾಗಿದ್ದರು. ಸುದ್ದಿಪತ್ರಿಕೆಯ ಫೇಸ್ ಬುಕ್ ಪುಟದಲ್ಲಿ ಕೂಡ ಇದೇ ಚಿತ್ರವನ್ನು ಶೇರ್ ಮಾಡಲಾಗಿದ್ದು, ಸುಮಾರು 4000 ಲೈಕ್‌ಗಳು ಬಂದಿವೆ.

ಭಾರತದ ಮಾಜಿ ವೇಗಿ ಅತುಲ್ ವಾಸನ್ ಈ ನಾಚಿಕೆಗೇಡಿನ ಕೃತ್ಯಕ್ಕೆ ಸುದ್ದಿಪತ್ರಿಕೆಯನ್ನು ತರಾಟೆಗೆ ತೆಗೆದುಕೊಂಡು, ಇದು ಬಿಸಿಬಿಗೆ ಕೂಡ ಮುಜುಗರ ಉಂಟುಮಾಡುತ್ತದೆ. ಸೋಲುವುದು ಆಟದ ಒಂದು ಭಾಗ. ಯಾರಿಗೂ ಆಟಗಾರರನ್ನು ಈ ರೀತಿ ಅವಮಾನಪಡಿಸಲು ಅವಕಾಶ ನೀಡಬಾರದು ಎಂದು ವಾಸನ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ