ಶೇನ್ ವಾರ್ನ್ ಸಾವಿನ ಸುತ್ತ ಅನುಮಾನಗಳಿಗೆ ತೆರೆ ಎಳೆದ ಮ್ಯಾನೇಜರ್
ಶೇನ್ ವಾರ್ನ್ ಈ ಮೊದಲು ಡ್ರಗ್ಸ್ ಕೇಸ್ ನಲ್ಲಿ ಸಿಲುಕಿದ್ದರು. ಅವರಿಗೆ ಕುಡಿತದ ಚಟವಿತ್ತು ಎಂಬ ಕಾರಣಕ್ಕೆ ಅವರ ಸಾವು ಸಹಜವಲ್ಲ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು.
ಆದರೆ ಇದಕ್ಕೆ ತೆರೆ ಎಳೆದಿರುವ ಮ್ಯಾನೇಜರ್ ಶೇನ್ ಕೊನೆಯ ಕ್ಷಣದಲ್ಲಿ ಮದ್ಯ ಸೇವಿಸುತ್ತಿರಲಿಲ್ಲ. ಅವರು ಟಿವಿಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದರು. ತಮ್ಮ ಡಾಕ್ಯುಮೆಂಟರಿ ಕುರಿತಾದ ಕೆಲಸಕ್ಕಾಗಿ ಥೈಲ್ಯಾಂಡ್ ಗೆ ಹೋಗಿದ್ದರು. ಡಾಕ್ಯುಮೆಂಟರಿ ವಿಚಾರಕ್ಕಾಗಿ ಅವರ ಸ್ನೇಹಿತ ಶೇನ್ ಬಳಿಗೆ ಬಂದಿದ್ದ. ಅಷ್ಟರಲ್ಲಿ ಶೇನ್ ಅಸ್ವಸ್ಥರಾಗಿರುವುದು ತಿಳಿದು ಬಾಯಿಗೆ ಉಸಿರು ನೀಡಿ ಬದುಕುಳಿಸುವ ಪ್ರಯತ್ನ ನಡೆಸಿದರು.ಆದರೆ ಸಾಧ‍್ಯವಾಗಿರಲಿಲ್ಲ ಎಂದು ಮ್ಯಾನೇಜರ್ ಮಾಧ‍್ಯಮವೊಂದಕ್ಕೆ ವಿವರಿಸಿದ್ದಾರೆ.