ಶತಕ ವಂಚಿತರಾದ ನಿರಾಸೆಯಲ್ಲಿ ಕಣ್ತುಂಬಿಕೊಂಡ ರಿಷಬ್ ಪಂತ್
81 ನೇ ಓವರ್ ನ ನಾಲ್ಕನೇ ಎಸೆತದಲ್ಲಿ ರಿಷಬ್ ವಿರುದ್ಧ ಲಂಕನ್ನರು ಔಟ್ ತೀರ್ಪಿಗೆ ರಿವ್ಯೂಗೆ ಮನವಿ ಸಲ್ಲಿಸಿದ್ದರು. ಆದರೆ ಅದೃಷ್ಟವಶಾತ್ ರಿಷಬ್ ನಾಟೌಟ್ ಆಗಿದ್ದರು. ಆದರೆ ಐದನ ಎಸೆತದಲ್ಲಿ ಲಕ್ಮಲ್ ಬಾಲ್ ಅಂದಾಜಿಸುವಲ್ಲಿ ವಿಫಲವಾದ ರಿಷಬ್ ಬೌಲ್ಡ್ ಔಟಾದರು.
ಆಗ ರಿಷಬ್ 96 ರನ್ ಗಳಿಸಿದ್ದರು. ಈ ನಿರಾಸೆಯಲ್ಲಿ ಕ್ಷಣ ಹೊತ್ತು ಕ್ರೀಸ್ ನಲ್ಲೇ ಕುಸಿದು ಕೂತ ರಿಷಬ್ ಸಪ್ಪೆ ಮುಖ ಹಾಕಿಕೊಂಡು ಪೆವಿಲಿಯನ್ ನತ್ತ ಮರಳಿದರು. ಪೆವಿಲಿಯನ್ ಗೆ ಬಂದ ಮೇಲೂ ರೋಹಿತ್ ಶರ್ಮಾ ಜೊತೆ ಭಾವುಕರಾಗಿ ಬೇಸರ ಹೊರಹಾಕುತ್ತಿದ್ದ ದೃಶ್ಯ ಕಂಡುಬಂತು.