ಬಿಸಿಸಿಐ ಅಧ್ಯಕ್ಷ ಗಾದಿ ಬಿಕ್ಕಟ್ಟು: ಜೇಟ್ಲಿಯನ್ನು ಭೇಟಿ ಮಾಡಿದ ಅನುರಾಗ್ ಠಾಕುರ್

ಶನಿವಾರ, 26 ಸೆಪ್ಟಂಬರ್ 2015 (17:00 IST)
ಬಿಸಿಸಿಐ ನಾಯಕತ್ವ ಬಿಕ್ಟಟ್ಟು ಪರಿಹಾರದ ಮಹತ್ವದ ಬೆಳವಣಿಗೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಮತ್ತು ಶರದ್ ಪವಾರ್ ಬಣಕ್ಕೆ ಸೇರಿದ ಕೆಲವು ಉನ್ನತ ಅಧಿಕಾರಿಗಳು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದರು. ಜಗನ್ಮೋಹನ್ ದಾಲ್ಮಿಯಾ ನಿಧನದ ಬಳಿಕ ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನು ಹುಡುಕುವುದು ಈ ಭೇಟಿಯ ಪ್ರಯತ್ನವಾಗಿದೆ. 
 
ಠಾಕುರ್ ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಮತ್ತು ಮಾಜಿ ಖಜಾಂಚಿ ಅಜಯ್ ಶಿರ್ಖೆ ಅವರ ಜತೆಗೂಡಿ ಜೇಟ್ಲಿ ನಿವಾಸದಲ್ಲಿ ಗುರುವಾರ ರಾತ್ರಿ ಭೇಟಿ ಮಾಡಿ ನಾಯಕತ್ವ ಬಿಕ್ಕಟ್ಟು ನಿವಾರಣೆಗೆ ಚರ್ಚೆ ನಡೆಸಿದರು. 
 
ಬಿಸಿಸಿಐ ಮಾಜಿ ಅಧ್ಯಕ್ಷರು ಮತ್ತು ಶರದ್ ಪವಾರ್ ಮತ್ತು ಶ್ರೀನಿವಾಸನ್ ನಡುವೆ ಸಂಭವನೀಯ ಮೈತ್ರಿಗೆ ಚಾಲನೆ ಸಿಕ್ಕಿರುವ ನಡುವೆ, ಠಾಕುರ್ ಬಣವು ಪವಾರ್ ಬಣದ ಸದಸ್ಯರ ಜತೆ ತೆರೆಮರೆಯ ಮಾತುಕತೆಯಲ್ಲಿ ತೊಡಗಿದೆ.
 
ವಾಸ್ತವವಾಗಿ ಶ್ರೀನಿವಾಸನ್ ಬಣದ ವಿರೋಧಿಯಾಗಿರುವ ಮನೋಹರ್ ಮತ್ತು ಶಿರ್ಕೆ ಗುರುವಾರ ಸಂಜೆಯೇ ದೆಹಲಿಗೆ ತೆರಳಿ ಜೇಟ್ಲಿ ಜತೆ ಮತ್ತು ಬಿಸಿಸಿಐ ಇತರೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು. 
 
ಜೇಟ್ಲಿ ನಿವಾಸದಲ್ಲಿ ಭೇಟಿ ನಡೆಯಿತು. ಮನೋಹರ್ ಮತ್ತು ಶಿರ್ಕೆ ಬಿಸಿಸಿಐನ ಪ್ರಸಕ್ತ ಸ್ಥಿತಿಯ ಬಗ್ಗೆ ಜೇಟ್ಲಿ ಜತೆ ಮಾತನಾಡಿದರು. ಠಾಕುರ್ ಕೂಡ ಉಪಸ್ಥಿತರಿದ್ದರು ಎಂದು ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ