ಎಂಟು ವರ್ಷದ ದಾಂಪತ್ಯಕ್ಕೆ ಗುಡ್ ಬೈ ಹೇಳಿದ ಶಿಖರ್ ಧವನ್-ಆಯೆಷಾ

ಬುಧವಾರ, 8 ಸೆಪ್ಟಂಬರ್ 2021 (08:45 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್-ಆಯೆಷಾ ವೈವಾಹಿಕ ಜೀವನ ಮುರಿದುಬಿದ್ದಿದೆ. ಇದನ್ನು ಸ್ವತಃ ಆಯೆಷಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.


ನಾನು ಮತ್ತೊಂದು ಬಾರಿ ವಿಚ್ಛೇದನಕ್ಕೆ ಮುಂದಾಗಿರುವುದಾಗಿ ಆಯೆಷಾ ಹೇಳಿಕೊಂಡಿದ್ದಾರೆ. ಆಯೇಷಾರದ್ದು ಎರಡನೇ ವಿವಾಹವಾಗಿತ್ತು. ಆದರೆ ಧವನ್ ವಿಚ್ಛೇದನದ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲ.

ಧವನ್-ಆಯೆಷಾ ದಂಪತಿಗೆ ಓರ್ವ ಪುತ್ರನಿದ್ದಾನೆ. ಇದೀಗ ಇಬ್ಬರೂ ಯಾವ ಕಾರಣಕ್ಕೆ ಬೇರೆಯಾಗುತ್ತಿದ್ದಾರೆ ಎಂಬ ವಿಚಾರವನ್ನು ಬಹಿರಂಗಪಡಿಸಿಲ್ಲ. ಮೆಲ್ಬೋರ್ನ್ ಮೂಲದ ಬಾಕ್ಸರ್ ಆಗಿರುವ ಆಯೆಷಾರನ್ನು 2012 ರಲ್ಲಿ ವಿವಾಹವಾಗಿದ್ದ ಧವನ್ ಆಕೆಯ ಮೊದಲ ಮದುವೆಯ ಇಬ್ಬರು ಹೆಣ್ಣು ಮಕ್ಕಳನ್ನೂ ದತ್ತು ಪಡೆದಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ