ಅವಕಾಶವೇ ಇಲ್ಲದೆ ಕೂತಿದ್ದ ಶಿಖರ್ ಧವನ್ ಏಕಾಏಕಿ ಟೀಂ ಇಂಡಿಯಾಗೆ ನಾಯಕ
ಸೆಪ್ಟೆಂಬರ್ ನಲ್ಲಿ ಏಕಕಾಲಕ್ಕೆ ಟೀಂ ಇಂಡಿಯಾ ಏಷ್ಯನ್ ಗೇಮ್ಸ್ ಮತ್ತು ಏಕದಿನ ವಿಶ್ವಕಪ್ ಆಡಬೇಕಾಗಬಹುದು. ಈ ಬಾರಿ ಏಷ್ಯನ್ ಗೇಮ್ಸ್ ನಲ್ಲಿ ಕ್ರಿಕೆಟ್ ಕೂಡಾ ಇರಲಿದ್ದು, ಬಿಸಿಸಿಐ ಕೂಡಾ ಭಾರತ ತಂಡವನ್ನು ಕಳುಹಿಸಲಿದೆ.
ಏಕದಿನ ವಿಶ್ವಕಪ್ ಇರುವ ಕಾರಣಕ್ಕೆ ರೋಹಿತ್ ಶರ್ಮಾ ನೇತೃತ್ವದ ಖಾಯಂ ತಂಡ ಏಷ್ಯನ್ ಗೇಮ್ಸ್ ಆಡಲು ಸಾಧ‍್ಯವಾಗಲ್ಲ. ಹೀಗಾಗಿ ಶಿಖರ್ ಧವನ್ ನೇತೃತ್ವದಲ್ಲಿ ಟೀಂ ಇಂಡಿಯಾ ಮತ್ತೊಂದು ತಂಡವನ್ನು ಕಳುಹಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಹೀಗಾಗಿ ಧವನ್ ಏಕಾಏಕಿ ನಾಯಕನಾಗಿ ತಂಡಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ. ಈ ತಂಡಕ್ಕೆ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಕಾರ್ಯನಿರ್ವಹಿಸಲಿದ್ದಾರೆ.