ವಿಶ್ವಕಪ್ ಆಯೋಜಿಸಲಿರುವ ಪ್ರತೀ ಮೈದಾನಕ್ಕೂ ಬಿಸಿಸಿಐ ನೀಡಲಿದೆ 50 ಕೋಟಿ!
ಶನಿವಾರ, 1 ಜುಲೈ 2023 (09:13 IST)
ಮುಂಬೈ: ಮುಂಬರುವ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, ಈಗಾಗಲೇ ಬಿಸಿಸಿಐ, ಐಸಿಸಿ ಜಂಟಿಯಾಗಿ ವಿವಿಧ ತಾಣಗಳನ್ನು ಘೋಷಣೆ ಮಾಡಿದೆ.
ಬೆಂಗಳೂರು, ಮುಂಬೈ, ಕೋಲ್ಕೊತ್ತಾ, ಅಹಮ್ಮದಾಬಾದ್, ಚೆನ್ನೈ ಸೇರಿದಂತೆ ಹಲವು ಮೈದಾನಗಳಲ್ಲಿ ಏಕದಿನ ವಿಶ್ವಕಪ್ ಪಂದ್ಯ ನಡೆಯಲಿದೆ. ಈ ಪಂದ್ಯ ನಡೆಯುವ ತಾಣಗಳಲ್ಲಿ ಈಗಾಗಲೇ ತಯಾರಿ ಆರಂಭವಾಗಿದೆ.
ಬಿಸಿಸಿಐ ಪ್ರತೀ ಮೈದಾನವನ್ನೂ ಮೇಲ್ದರ್ಜೆಗೇರಿಸಲು ಯೋಜನೆ ಹಾಕಿಕೊಂಡಿದೆ. ಅದಕ್ಕಾಗಿ ಪ್ರತೀ ಮೈದಾನಕ್ಕೆ 50 ಕೋಟಿ ರೂ.ಗಳ ಅನುದಾನ ನೀಡಿದೆ. ಪ್ರತೀ ಮೈದಾನದಲ್ಲೂ ಔಟ್ ಫೀಲ್ಡ್, ಮೂಲಭೂತ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ.
ಕೋಲ್ಕೊತ್ತಾದಲ್ಲಿ ಡ್ರೆಸ್ಸಿಂಗ್ ರೂಂ, ಧಮರ್ಶಾಲಾದಲ್ಲಿ ಔಟ್ ಫೀಲ್ಡ್, ದೆಹಲಿಯ ಮೈದಾನದಲ್ಲಿ ಟಾಯ್ಲೆಟ್, ಟಿಕೆಟ್ ವಿತರಣೆ ವ್ಯವಸ್ಥೆ, ಮುಂಬೈನಲ್ಲಿ ಔಟ್ ಫೀಲ್ಡ್, ಶೌಚಾಲಯ ದುರಸ್ಥಿ, ಚೆನ್ನೈನಲ್ಲಿ ಎಲ್ ಇಡಿ ಲೈಟ್ ವ್ಯವಸ್ಥೆ ಸೇರಿದಂತೆ ಹಲವು ಮೈದಾನಗಳಲ್ಲಿ ತಯಾರಿ ಭರದಿಂದ ಸಾಗಿದೆ.