ಶಾಕಿಂಗ್: ಕಚೋರಿ ಮಾರುತ್ತಿರುವ ವಿಶ್ವಕಪ್ ಗೆದ್ದ ಕ್ರಿಕೆಟಿಗ

ಸೋಮವಾರ, 30 ನವೆಂಬರ್ 2015 (20:20 IST)
ಕಳೆದ 2005ರಲ್ಲಿ ನಡೆದ ಮೂಗ ಮತ್ತು ಕಿವುಡರ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಗೆಲ್ಲಲು ಕಾರಣವಾಗಿದ್ದ ಕ್ರಿಕೆಟಿಗನೊಬ್ಬ ಆರ್ಥಿಕ ದುಸ್ಥಿತಿಯಿಂದಾಗಿ ಇಂದು ಹೊಟ್ಟೆಪಾಡಿಗಾಗಿ ಕಚೋರಿ ಮಾರುತ್ತಿರುವುದು ಆಘಾತ ಮೂಡಿಸಿದೆ.  
 
ಮಾಧ್ಯಮ ವರದಿಗಳ ಪ್ರಕಾರ, ಕ್ರಿಕೆಟ್ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ ಇಮ್ರಾನ್ ಶೇಕ್, ನಗರದ ಓಲ್ಡ್ ಪಾಂಡ್ರಾ ಬಡಾವಣೆಯಲ್ಲಿ ಮೂಂಗ್ ಕಚೋರಿ ಮಾರಾಟ ಮಾಡುತ್ತಿದ್ದಾನೆ. 
 
30 ವರ್ಷ ವಯಸ್ಸಿನ ಇಮ್ರಾನ್, 2005ರಲ್ಲಿ ತಂಡದಲ್ಲಿದ್ದಾಗ ಎರಡು ಅರ್ಧಶತಕಗಳನ್ನು ಬಾರಿಸಿ ತಂಡದ ಗೆಲುವಿಗೆ ಕಾರಣವಾಗಿದ್ದರು.
 
ಕ್ರಿಕೆಟ್ ಅಂದ್ರೆ ನನಗೆ ಜೀವಾಳ, ನಾನು ಸದಾ ಕ್ರಿಕೆಟ್ ಆಡಲು ಬಯಸುತ್ತೇನೆ. ಆದರೆ, ನನ್ನ ಆರ್ಥಿಕ ದುಸ್ಥಿತಿಯಿಂದಾಗಿ ಕುಟುಂಬವನ್ನು ಸಲುಹಲು ಕೂಡಾ ಸಾಧ್ಯವಾಗುತ್ತಿಲ್ಲ. ಮೂಗ ಮತ್ತು ಕಿವುಡರ ಕ್ರಿಕೆಟ್ ಪಂದ್ಯಗಳಿಂದ ಹಣ ಸಂಪಾದಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನನ್ನ ಪತ್ನಿ ರೋಜಾಳ ನೆರವಿನಿಂದ ಕಚೋರಿ ಮಾರಾಟ ಮಾಡುತ್ತಿದ್ದೇನೆ, ನನ್ನ ಕೋಚ್ ನಿತೇಂದ್ರ ಸಿಂಗ್ ನನಗೆ ಗುಜರಾತ್ ರಿಫೈನರಿಯಲ್ಲಿ ಗುತ್ತಿಗೆ ಆಧಾರಿತ ಉದ್ಯೋಗ ಕೊಡಿಸಿದ್ದರಿಂದ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಇಮ್ರಾನ್ ತನ್ನ ದಾರುಣ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
 
ವಿಶ್ವಕಪ್‌ನ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಇಮ್ರಾನ್, 40 ರನ್‌ಗಳನ್ನು ಬಾರಿಸಿದ್ದಲ್ಲದೇ ಮಹತ್ವದ ಮೂರು ವಿಕೆಟ್‌ಗಳನ್ನು ಪಡೆದು ಭಾರತ ತಂಡದ ಗೆಲುವಿನ ರೂವಾರಿಯಾಗಿದ್ದರು. 
 

ವೆಬ್ದುನಿಯಾವನ್ನು ಓದಿ