ಕ್ವಾರಂಟೈನ್ ನಲ್ಲಿ ಕ್ರಿಕೆಟಿಗ ಶಿಖರ್ ಧವನ್, ಶ್ರೇಯಸ್ ಐಯರ್

ಬುಧವಾರ, 3 ಮಾರ್ಚ್ 2021 (10:38 IST)
ಅಹಮ್ಮದಾಬಾದ್‍: ಟೀಂ ಇಂಡಿಯಾ ಸೀಮಿತ ಓವರ್ ಗಳ ಸ್ಪೆಷಲಿಸ್ಟ್ ಕ್ರಿಕೆಟಿಗರಾದ ಶಿಖರ್ ಧವನ್, ಶ್ರೇಯಸ್ ಐಯರ್ ಇದೀಗ ಕ್ವಾರಂಟೈನ್ ನಲ್ಲಿದ್ದಾರೆ.


ಇಂಗ್ಲೆಂಡ್ ವಿರುದ್ಧ ಮಾರ್ಚ್ 4 ರಂದು ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಅದಾದ ಬಳಿಕ ಸೀಮಿತ ಓವರ್ ಗಳ ಸರಣಿ ಆಡಲಿದೆ. ಮಾರ್ಚ್ 12 ರಿಂದ ಟಿ20 ಸರಣಿ ಆರಂಭವಾಗುತ್ತಿದ್ದು, ಐದು ಪಂದ್ಯಗಳ ಸರಣಿ ನಡೆಯಲಿದೆ.

 ಈ ಸರಣಿಯಲ್ಲಿ ಪಾಲ್ಗೊಳ್ಳಲು ಟೀಂ ಇಂಡಿಯಾ ಸೀಮಿತ ಓವರ್ ಗಳ ಸ್ಪೆಷಲಿಸ್ಟ್ ಆಟಗಾರರು ಈಗಾಗಲೇ ಅಹಮ್ಮದಾಬಾದ್ ಗೆ ಬಂದಿಳಿದಿದ್ದಾರೆ. ಈಗಿನಿಂದಲೇ ಈ ಆಟಗಾರರನ್ನು ಸುರಕ್ಷತಾ ದೃಷ್ಟಿಯಿಂದ ಕ್ವಾರಂಟೈನ್ ಗೊಳಪಡಿಸಲಾಗಿದೆ.

ಶ್ರೇಯಸ್ ಐಯರ್ ಜೊತೆಗೆ ಕ್ವಾರಂಟೈನ್ ನಲ್ಲಿರುವ ಫೋಟೋವನ್ನು ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಿಗದಿತ ಸಮಯದವರೆಗೆ ಕ್ವಾರಂಟೈನ್ ಗೊಳಗಾಗಲಿರುವ ಕ್ರಿಕೆಟಿಗರು ಬಳಿಕ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ