ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಗಂಭೀರ ಖಾಯಿಲೆನಾ?!

ಬುಧವಾರ, 3 ಮಾರ್ಚ್ 2021 (09:35 IST)
ಅಹಮ್ಮದಾಬಾದ್: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ನಿನ್ನೆ ಕೊರೋನಾ ವ್ಯಾಕ್ಸಿನ್ ಮೊದಲ ಡೋಸ್ ಪಡೆದುಕೊಂಡಿರುವುದಾಗಿ ಫೋಟೋ ಸಮೇತ ಬಹಿರಂಗಪಡಿಸಿದ್ದಾರೆ.


58 ವರ್ಷದ ರವಿಶಾಸ್ತ್ರಿ ಹೀಗೊಂದು ಫೋಟೋ ಹಾಕುತ್ತಿದ್ದಂತೇ ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದ್ದಾರೆ. ಯಾಕೆಂದರೆ ಎರಡನೇ ಹಂತದ ಕೊರೋನಾ ವ್ಯಾಕ್ಸಿನ್ ವಿತರಣೆಯಾಗುತ್ತಿರುವುದು 60 ವರ್ಷ ಮೇಲ್ಪಟ್ಟ ವಯೋವೃದ್ಧರು ಮತ್ತು 45 ವರ್ಷ ಮೇಲ್ಪಟ್ಟ ಅನಾರೋಗ್ಯ ಪೀಡಿತರಿಗೆ ಮಾತ್ರ.

ಹಾಗಿದ್ದರೆ ಶಾಸ್ತ್ರಿ ಯಾವ ಕ್ಯಾಟಗರಿಯಲ್ಲಿ ವ್ಯಾಕ್ಸಿನ್ ಹಾಕಿಸಿಕೊಂಡರು ಎಂದು ಹಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಹಾಗಿದ್ದಲ್ಲಿ ರವಿಶಾಸ್ತ್ರಿಗೆ 45 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಇರಬೇಕಾದ ಖಾಯಿಲೆಗಳ ಪಟ್ಟಿಯಲ್ಲಿ ಯಾವುದಾದರೊಂದು ಖಾಯಿಲೆ ಇರಬೇಕು. ಹಾಗಾಗಿಯೇ ಅವರಿಗೆ ವ್ಯಾಕ್ಸಿನ್ ಪಡೆದುಕೊಳ್ಳಲು ಸಾಧ‍್ಯವಾಗಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ