ಶುಬ್ಮನ್ ಗಿಲ್ ಗೆ ಗಾಯ: ರೋಹಿತ್ ಶರ್ಮಾಗೆ ಟೆನ್ ಷನ್

ಬುಧವಾರ, 15 ನವೆಂಬರ್ 2023 (16:45 IST)
Photo Courtesy: Twitter
ಮುಂಬೈ: ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯವಾಡುತ್ತಿರುವ ಟೀಂ ಇಂಡಿಯಾಗೆ ಶುಬ್ಮನ್ ಗಿಲ್ ಗಾಯಗೊಂಡು ಅರ್ಧಕ್ಕೇ ಬ್ಯಾಟಿಂಗ್ ನಿಂದ ನಿವೃತ್ತಿ ಪಡೆದಿರುವುದು ಆಘಾತದ ವಿಷಯವಾಗಿದೆ.

ಗಿಲ್ ಗಾಯಗೊಂಡು ಮೈದಾನದಲ್ಲೇ ಕುಸಿದು ಕೂತಾಗ ಪೆವಿಲಿಯನ್ ನಲ್ಲಿದ್ದ ರೋಹಿತ್ ಶರ್ಮಾ ಟೆನ್‍ ಷನ್ ನಿಂದ ಅತ್ತಿತ್ತ
ಓಡಾಡುತ್ತಿದ್ದರು. ಯಾಕೆಂದರೆ ಗಿಲ್ ಭಾರತದ ಉಪಯುಕ್ತ ಆಟಗಾರ. ಅವರು ಫಿಟ್ ಆಗಿರುವುದು ಟೀಂ ಇಂಡಿಯಾಗೆ ಮಹತ್ವದ್ದಾಗಿದೆ. ಪೆವಿಲಿಯನ್ ಗೆ ತೆರಳುವ ಮೊದಲು ಗಿಲ್ 65 ಎಸೆತಗಳಿಂದ 79 ರನ್ ಗಳಿಸಿದ್ದರು.

ಅಷ್ಟು ಮಾತ್ರವಲ್ಲ, ಇಡೀ ತಾವು ಬಿರುಸಾಗಿ 47 ರನ್ ಗಳಿಸಿ ಔಟಾಗಿ ಪೆವಲಿಯನ್ ಸೇರಿಕೊಂಡಾಗಿನಿಂದಲೂ ರೋಹಿತ್ ಟೆನ್ ಷನ್ ನಲ್ಲೇ ಪೆವಿಲಿಯನ್ ನಲ್ಲಿ ನಿಂತೇ ಇದ್ದಿದ್ದು ಕಂಡುಬಂತು. ಪದೇ ಪದೇ 12 ನೇ ಆಟಗಾರನ ಬಳಿ ಮೈದಾನದಲ್ಲಿದ್ದ ಬ್ಯಾಟಿಗರಿಗೆ ಸಂದೇಶ ಕಳುಹಿಸುತ್ತಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ