ಏಕದಿನ ವಿಶ್ವಕಪ್: ಭಾರತ-ನ್ಯೂಜಿಲೆಂಡ್ ಸೆಮಿಫೈನಲ್ ಪಿಚ್, ಹವಾಮಾನ ವರದಿ ಹೇಗಿದೆ?

ಬುಧವಾರ, 15 ನವೆಂಬರ್ 2023 (09:10 IST)
ಮುಂಬೈ: ಏಕದಿನ ವಿಶ್ವಕಪ್ ನಲ್ಲಿ ಇಂದು ಭಾರತ ಮತ್ತು ನ್ಯೂಜಿಲೆಂಡ್ ಜಿದ್ದಾಜಿದ್ದಿನ ಸೆಮಿಫೈನಲ್ ಪಂದ್ಯಕ್ಕೆ ಸಜ್ಜಾಗಿದೆ. ಲೀಗ್ ಹಂತದಲ್ಲಿ ಎಲ್ಲಾ ಪಂದ್ಯ ಗೆದ್ದು ಬೀಗಿರುವ ಭಾರತಕ್ಕೆ ಈಗ ತವರಿನಲ್ಲಿ ಮತ್ತೆ ಫೈನಲ್ ಗೇರುವ ಅವಕಾಶ ಒದಗಿಬಂದಿದೆ.

ಇಂದಿನ ಪಂದ್ಯ ನಡೆಯುತ್ತಿರುವುದು ಮುಂಬೈನ ವಾಂಖೆಡೆ ಮೈದಾನದಲ್ಲಿ. ಇದೇ ಮೈದಾನದಲ್ಲಿ ಟೀಂ ಇಂಡಿಯಾ ಲೀಗ್ ಹಂತದಲ್ಲಿ ಶ್ರೀಲಂಕಾ ವಿರುದ್ಧ ಆಡಿ ಭರ್ಜರಿ ಗೆಲುವು ದಾಖಲಿಸಿತ್ತು. ಆ ಪಂದ್ಯದಲ್ಲಿ ವೇಗಿಗಳು ಮೇಲುಗೈ ಸಾಧಿಸಿದ್ದರು. ಇಂದಿನ ಪಂದ್ಯದಲ್ಲಿ ಪಿಚ್ ವೇಗಿಗಳು ಸಹಕರಿಸುವ ನಿರೀಕ್ಷೆಯಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಗೆಲ್ಲುವ ಅವಕಾಶ ಹೆಚ್ಚು.

ಇನ್ನು, ಹವಾಮಾನ ವರದಿ ಪ್ರಕಾರ ಇಂದು ಮಳೆ ಸಾಧ‍್ಯತೆಯಿಲ್ಲ. ಇದು ಕ್ರಿಕೆಟ್ ಪ್ರೇಮಿಗಳಿಗೆ ಶುಭ ಸುದ್ದಿ. ಒಂದು ವೇಳೆ ಮಳೆ ಬಂದು ಪಂದ್ಯ ನಡೆಯದೇ ಹೋದರೂ ಟೀಂ ಇಂಡಿಯಾಕ್ಕೆ ಫೈನಲ್ ಗೇರುವ ಅವಕಾಶವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ