ಅಪ್ಪನಂತೆ ಮಗ: ಅಂಡರ್‌-16 ಪಂದ್ಯದಲ್ಲಿ ಶತಕ ಸಿಡಿಸಿದ ಅರ್ಜುನ್ ತೆಂಡೂಲ್ಕರ್

ಬುಧವಾರ, 25 ನವೆಂಬರ್ 2015 (15:43 IST)
ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಎಂದು ಖ್ಯಾತರಾದ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ತಂದೆಯ ದಾರಿಯಲ್ಲಿ ಸಾಗುವಂತೆ ಕಂಡುಬರುತ್ತಿದ್ದು, ನಿನ್ನೆ ಶತಕ ಸಿಡಿಸಿದ್ದಾರೆ.
 
ಮುಂಬೈ ಕ್ರಿಕೆಟ್ ಸಂಸ್ಥೆ ಆಯೋಜಿಸಿದ ಪಯ್ಯಾಡೆ ಟ್ರೋಫಿಯಲ್ಲಿ ಸುನೀಲ್ ಗವಾಸ್ಕರ್ ಎಲೆವನ್ ತಂಡದ ಪರವಾಗಿ ಆಡಿದ ಅರ್ಜುನ್, ಎದುರಾಳಿ ರೋಹಿತ್ ಶರ್ಮಾ ಎಲೆವನ್ ತಂಡದ ವಿರುದ್ಧ 106 ರನ್‌ಗಳಿಸಿದ್ದಾರೆ. 
 
ಸಚಿನ್ ಜಿಮ್‌ಖಾನಾ ಗ್ರೌಂಡ್‌ನಲ್ಲಿ ನಡೆದ ಪಂದ್ಯದಲ್ಲಿ 16 ವರ್ಷ ವಯಸ್ಸಿನ ಅರ್ಜುನ್ ಶತಕ ಸಿಡಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು.  
 
ಆದರೆ, ಸಚಿನ್ ತೆಂಡೂಲ್ಕರ್‌ರಂತೆ ಅರ್ಜುನ್ ಬಲಗೈ ಬ್ಯಾಟ್ಸ್‌ಮೆನ್ ಅಲ್ಲ, ಎಡಗೈ ಬ್ಯಾಟ್ಸ್‌ಮೆನ್ ಮತ್ತು ಎಡಗೈ ಬೌಲರ್ ಆಗಿ ಹೊರಹೊಮ್ಮಿದ್ದಾರೆ. 
 
ಪ್ರಸಕ್ತ ವರ್ಷದ ಆರಂಭದಲ್ಲಿ ಅರ್ಜುನ್ ತೆಂಡೂಲ್ಕರ್ ಇಂಗ್ಲೆಂಡ್ ಕ್ರಿಕೆಟಿಗನಿಗೆ ಬೌಲಿಂಗ್ ಮಾಡುತ್ತಿರುವ ಚಿತ್ರ ಎಲ್ಲರ ಮನಸೂರೆಗೊಂಡಿತ್ತು.
 
ಲಿಟ್ಲ್ ಮಾಸ್ಟರ್ ಅರ್ಜುನ್ ತೆಂಡೂಲ್ಕರ್, ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕೇವಲ 42 ಎಸೆತಗಳಲ್ಲಿ 118 ರನ್ ಪೇರಿಸಿದ್ದರು. 

ವೆಬ್ದುನಿಯಾವನ್ನು ಓದಿ