ಎರಡೂ ತಂಡಗಳ ಪರ ಅಭಿಮಾನಿಗಳು ಕಲೆತಿದ್ದು, ಆಸ್ಟ್ರೇಲಿಯಾದ ಬ್ಯಾಟಿಂಗ್ ಪ್ರದರ್ಶನವನ್ನು ಮನಸಾರೆ ಆನಂದಿಸಿದರು. ಆದರೆ ಭಾರತದ ಅಭಿಮಾನಿಗಳು ಭಾರತ ಕೂಡ ಆಸಿಸ್ ಬೃಹತ್ ಮೊತ್ತ ಚೇಸ್ ಮಾಡುತ್ತದೆಂಬ ಆಶಾಭಾವನೆ ಹೊಂದಿದ್ದು, ಭಾರತ ಫೈನಲ್ ಪ್ರವೇಶಿಸುವ ಕನಸು ಕಂಡಿದ್ದಾರೆ. ಡೇವಿಡ್ ವಾರ್ನರ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ, ಸ್ಮಿತ್ ಮತ್ತು ಫಿಂಚ್ ನಿರಾಯಾಸವಾಗಿ ಬ್ಯಾಟಿಂಗ್ ಮಾಡಿ ಎರಡನೇ ವಿಕೆಟ್ಗ 184 ರನ್ ಕಲೆಹಾಕಿದರು.