ಕರ್ನಾಟಕ ಅಭಿಮಾನಿಗಳಿಂದ ದಿಲ್ ಖುಷ್ ಆದ ದಾದ ಸೌರವ್ ಗಂಗೂಲಿ

ಶುಕ್ರವಾರ, 1 ನವೆಂಬರ್ 2019 (08:55 IST)
ಬೆಂಗಳೂರು: ಎನ್ ಸಿಎ ಕುರಿತು ರಾಹುಲ್ ದ್ರಾವಿಡ್ ಜತೆ ಚರ್ಚಿಸಲು ಬೆಂಗಳೂರಿಗೆ ಬಂದಿಳಿದಿದ್ದ ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ ಅಭಿಮಾನಿಗಳೊಂದಿಗೆ ತೆಗೆಸಿಕೊಂಡ ಫೋಟೋ ಒಂದು ಈಗ ವೈರಲ್ ಆಗಿದೆ.


ಗಂಗೂಲಿ ಕ್ರಿಕೆಟ್ ನಿಂದ ನಿವೃತ್ತಿಯಾಗಿ ಎಷ್ಟೇ ವರ್ಷಗಳಾದರೂ ಅವರ ನಾಯಕತ್ವವನ್ನು ಇಂದಿಗೂ ನೆನೆಸಿಕೊಂಡು ಅಭಿಮಾನ ಪಡುವ ಎಷ್ಟೋ ಅಭಿಮಾನಿಗಳಿದ್ದಾರೆ. ಅದರಂತೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಅವರನ್ನು ಸುತ್ತುವರಿದಿದ್ದಾರೆ.

ಇವರನ್ನು ನಿರಾಶೆಗೊಳಿಸದ ಗಂಗೂಲಿ ಎಲ್ಲರೊಂದಿಗೆ ಸೆಲ್ಫೀ ತೆಗೆಸಿಕೊಂಡು ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಲ್ಲದೆ, ಕರ್ನಾಟಕದ ಅಭಿಮಾನಿಗಳ ಅಭಿಮಾನಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ