ಶುಭಮನ್ ಗಿಲ್ ಗೆ ಯಾಕ್ರೀ ಓಪನಿಂಗ್ ಕೊಟ್ರಿ, ಸಂಜು ಸ್ಯಾಮ್ಸನ್ ಕಣ್ಣಿಗೆ ಕಾಣಿಸಲ್ವಾ
ಬಹಳ ದಿನಗಳ ನಂತರ ಶುಭಮನ್ ಗಿಲ್ ಗೆ ಟಿ20 ಫಾರ್ಮ್ಯಾಟ್ ನಲ್ಲಿ ಅವಕಾಶ ನೀಡಲಾಗಿತ್ತು. ಆಗಲೇ ಸಂಜು ಸ್ಯಾಮ್ಸನ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಯಾಕೆಂದರೆ ಕಳೆದ ಕೆಲವು ದಿನಗಳಿಂದಲೂ ಸಂಜು ಟಿ20 ಫಾರ್ಮ್ಯಾಟ್ ನಲ್ಲಿ ಓಪನರ್ ಆಗಿ ಮಿಂಚುತ್ತಿದ್ದಾರೆ.
ಆದರೆ ಈಗ ಗಿಲ್ ಗೆ ಅವಕಾಶ ನೀಡುವ ನಿಟ್ಟಿನಿಂದ ಅವರನ್ನು ಕೆಳ ಕ್ರಮಾಂಕಕ್ಕೆ ದೂಡಲಾಯಿತು. ಆದರೆ ಗಿಲ್ ಓಪನರ್ ಆಗಿ ಇದುವರೆಗೆ ಕ್ಲಿಕ್ ಆಗಿಲ್ಲ. ಕಳೆದ ಮೂರು ಪಂದ್ಯಗಳಲ್ಲಿ ಅವರು ಮಾಡಿದ್ದು ಕ್ರಮವಾಗಿ 20, 10 ಮತ್ತು 5 ರನ್ ಮಾತ್ರ. ಒಮನ್ ನಂತಹ ದುರ್ಬಲ ತಂಡದ ಎದುರೂ ಗಿಲ್ ಗಳಿಸಿದ್ದು ಕೇವಲ 5 ರನ್.
ಹೀಗಾಗಿ ಅಭಿಮಾನಿಗಳು ಸಿಟ್ಟಾಗಿದ್ದು ಅವರು ಬ್ಯಾಟಿಂಗ್ ಟ್ರ್ಯಾಕ್ ಗಷ್ಟೇ ಲಾಯಕ್ಕು. ಗಿಲ್ ಗೆ ಸ್ಥಾನ ಕೊಡಿಸುವ ಉದ್ದೇಶದಿಂದ ಸಂಜು ಸ್ಯಾಮ್ಸನ್ ರನ್ನು ಕಡೆಗಣಿಸಿದ್ರಿ ಎಂದು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಮೇಲೆ ಸಿಟ್ಟು ಹೊರಹಾಕಿದ್ದಾರೆ.