ಸರಣಿ ಸೋಲಿನಿಂದ ತಪ್ಪಿಸಿಕೊಳ್ಳಲು ದ.ಆಫ್ರಿಕಾ ಕೆಚ್ಚೆದೆಯ ಹೋರಾಟ: 126ಕ್ಕೆ 4 ವಿಕೆಟ್

ಶುಕ್ರವಾರ, 27 ನವೆಂಬರ್ 2015 (13:15 IST)
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕಾನ್ಪುರದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಮೂರನೇ ದಿನದಾಟದಲ್ಲಿ  ದಕ್ಷಿಣ ಆಫ್ರಿಕಾ 4 ವಿಕೆಟ್ ಕಳೆದುಕೊಂಡು 122 ರನ್ ಗಳಿಸಿದ್ದು, ಸೋಲಿನ ಸುಳಿಯಿಂದ ಪಾರಾಗುವುದಕ್ಕೆ ಕೆಚ್ಚೆದೆಯ ಹೋರಾಟ ನಡೆಸಿದೆ.  ದಕ್ಷಿಣ ಆಫ್ರಿಕಾ ಗೆಲ್ಲಲು ಇನ್ನೂ 188 ರನ್ ಅವಶ್ಯಕತೆಯಿದ್ದು,  ಹಶೀಮ್ ಆಮ್ಲಾ ಮತ್ತು ಫಾಫ್ ಡು ಪ್ಲೆಸಿಸ್ 65 ರನ್ ಕಲೆಹಾಕಿದ್ದು, ಆಮ್ಲಾ 37 ರನ್ ಮತ್ತು ಪ್ಲೆಸಿಸ್ 30 ರನ್ ಗಳಿಸಿದ್ದಾರೆ.

ರವಿಚಂದ್ರನ್ ಅಶ್ವಿನ್ 3 ವಿಕೆಟ್ ಕಬಳಿಸಿದ್ದರೆ, ಅಮಿತ್ ಮಿಶ್ರಾ ಒಂದು ವಿಕೆಟ್ ಗಳಿಸಿದ್ದಾರೆ. ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 173 ರನ್‌ಗೆ ಆಲೌಟ್‌ ಆಗಿದ್ದು,  ದಕ್ಷಿಣ ಆಫ್ರಿಕಾಗೆ  310 ರನ್ ಗೆಲುವಿನ ಗುರಿಯನ್ನು ನೀಡಿದೆ.

 ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲರುಗಳ ಸ್ಪಿನ್ ಕೈಚಳಕಕ್ಕೆ ಶರಣಾಗಿ ಕೇವಲ 79 ರನ್‌ಗಳಿಗೆ ಆಲೌಟ್ ಆಗಿ ಶೋಚನೀಯ ಸ್ಥಿತಿಯಲ್ಲಿ ಸಿಕ್ಕಿಬಿದ್ದಿತ್ತು. ಈಗ ಭಾರತದ ವಿರುದ್ಧ ಜಯಗಳಿಸುವ ಮೂಲಕ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳುವುದು ದಕ್ಷಿಣ ಆಫ್ರಿಕಾಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 

ವೆಬ್ದುನಿಯಾವನ್ನು ಓದಿ